WD ಆಂಧ್ರಪ್ರದೇಶದ ಪೂರ್ವಕರಾವಳಿಯಲ್ಲಿನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ)ಚಂದ್ರಯಾನ-1 ನೌಕೆ ಬುಧವಾರ 6.22ರ ವೇಳೆ ಯಶಸ್ವಿಯಾಗಿ ಉಡ್ಡಯನಗೊಂಡಿದ್ದು, ಈ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲೇ ನೂತನ ಮೈಲಿಗಲ್ಲು ಸ್ಥಾಪಿಸಿದೆ.ಉಡಾವಣೆಗೆ ಕೆಲಗಂಟೆಗಳ ಮುಂದೆ ಶ್ರೀಹರಿಕೋಟಾದಲ್ಲಿ ಮಳೆ ಸುರಿಯುತ್ತಿದ್ದಾರೂ ಈ ಬಗ್ಗೆ ವಿಜ್ಞಾನಿಗಳು ಹೆಚ್ಚು ಆತಂಕಗೊಂಡಿರಿರಲಿಲ್ಲ. ಆದರೆ, ಬಿರುಗಾಳಿ, ಗುಡುಗು ಮಿಂಚು ಬಂದರೆ ಯಾನವನ್ನೇ ಮುಂದೂಡಬೇಕೆನ್ನುವ ಆತಂಕವು ವಿಜ್ಞಾನಿಗಳಲ್ಲಿ ಮನೆ ಮಾಡಿತ್ತು. ಆದರೆ, ಚಂದ್ರಯಾನ-1 ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಉಡ್ಡಯನಗೊಂಡಿದ್ದು, ಭಾರತದ