ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾಸಿಕ್: ಎಬಿವಿಪಿ ಕಚೇರಿ ಮೇಲೆ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಸಿಕ್: ಎಬಿವಿಪಿ ಕಚೇರಿ ಮೇಲೆ ದಾಳಿ
ಮಾಲೆಗಾಂವ್ ಹಾಗೂ ಮೊದಾಸಾ ಸ್ಫೋಟದಲ್ಲಿ ಭಾರತೀಯ ಜನತಾ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೈವಾಡ ಇರುವುದನ್ನು ಪ್ರತಿಭಟಿಸಿದ ಎನ್‌ಸಿಪಿ ವಿದ್ಯಾರ್ಥಿ ಸಂಘಟನೆ ಶನಿವಾರ ಇಲ್ಲಿನ ಎಬಿವಿಪಿ ಕಚೇರಿಯ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಬಿವಿಪಿ ವಿರುದ್ಧ ಘೋಷಣೆ ಕೂಗುತ್ತಾ ಆಗಮಿಸಿದ ಎನ್‌ಸಿಪಿ ಸ್ಟೂಡೆಂಟ್ ವಿಂಗ್‌ನ ಕಾರ್ಯಕರ್ತರು ಅಶೋಕ್ ಸ್ಟಾಂಭಾ ಪ್ರದೇಶದಲ್ಲಿ ಎಬಿವಿಪಿ ಕಚೇರಿಯ ಮೇಲೆ ದಾಳಿ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಲ್ಲದೇ ವಿಶ್ವ ಹಿಂದೂ ಪರಿಷತ್‌ನ ನಾಮಫಲಕವನ್ನು ಕಿತ್ತೊಗೆದಿರುವುದಾಗಿ ಹೇಳಿದ್ದಾರೆ.

ದಾಳಿ ನಡೆಸಿದ ಸಂದರ್ಭದಲ್ಲಿ ಕಾರ್ಯಕರ್ತರು ಮುಖಕ್ಕೆ ಬಟ್ಟೆಯನ್ನು ಮುಚ್ಚಿಕೊಂಡಿರುವುದಾಗಿ ಎಬಿವಿಪಿ ಕಚೇರಿಯಲ್ಲಿದ್ದ ಸದಸ್ಯರು ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಾಯುಪಡೆಗೆ ನೂತನ ಯುದ್ಧ ವಿಮಾನ: ಆಂಟನಿ
ಮಾಲೆಗಾಂವ್ ಸ್ಫೋಟ: ಇಬ್ಬರು ಮಾಜಿ ಸೇನಾಧಿಕಾರಿಗಳ ವಶ
ವಾಯುಪಡೆಯಲ್ಲಿ ರಾಡಾರ್ ಕೊರತೆ ಇದೆ: ಆಂಟನಿ
ಬಿಹಾರ ಹುಡುಗ ಸತ್ತಿದ್ದು ಅಪಘಾತದಿಂದ
ಸಿಯಾಚಿನ್‌ ಸೈನಿಕರಿಗೆ ಹರಿದ ಬಟ್ಟೆಗಳು: ಸಿಎಜಿ
ಶಾಂತಿಯಿಲ್ಲದೆ ಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ: ಸಿಂಗ್