ಪಾಕಿಸ್ತಾವು ಗಂಭೀರ ಕಷ್ಟವನ್ನು ಎದುರಿಸುತ್ತಿದೆ ಎಂದು ಹೇಳಿರುವ ಪ್ರಧಾನಿ ಮನಮನೋಹನ್ ಸಿಂಗ್, ಐಎಂಎಫ್ ನೆರವು ಪಡೆಯಲು ಪಾಕಿಸ್ತಾನಕ್ಕೆ ಸಹಾಯಮಾಡಲು ಭಾರತವು ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.ಅವರು ಏಶ್ಯಾ-ಯೂರೋಪ್ ಶೃಂಗ ಸಭೆಯಿಂದ ಹಿಂತಿರುಗಿದ ಬಳಿಕ ಸುದ್ದಿಗಾರರೊಂದಿದೆ ಮಾತನಾಡುತ್ತಿದ್ದರು. ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜ ಗಿಲಾನಿ ಅವರೊಂದಿಗಿನ ಭೇಟಿ ಫಲಪ್ರದವಾಗಿತ್ತು ಹಾಗೂ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಚರ್ಚಿಸಿರುವುದಾಗಿ ನುಡಿದ ಅವರು, ಅಲ್ಲಿ ಮನಸುಗಳು ಸಂಪೂರ್ಣವಾಗಿ ಸಂಧಿಸಿದ್ದವು ಎಂದು ಅವರು ತಿಳಿಸಿದರು.ಚೀನ ಅಧ್ಯಕ್ಷ ಹು ಜಿಂತಾವೊ ಅವರೊಂದಿಗಿನ ಸಭೆಯು ಹೇಗೆ ನಡೆಯಿತು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಭಾರತ ಮತ್ತು ಚೀನವು ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪರಸ್ಪರ ಸಂಪರ್ಕದಲ್ಲಿ ಇರಲಿವೆ ಹಾಗೂ ಈ ಸಮಸ್ಯೆಗೆ ಪ್ರಾಯೋಗಿಕ ಹಾಗೂ ಧನಾತ್ಮಕ ಪರಿಹಾರ ಕಂಡುಕೊಳ್ಳಲು ಸಮಾನ ಮನಸ್ಕ ರಾಷ್ಟ್ರಗಳೊಂದಿದೆ ಕಾರ್ಯ ನಿರ್ವಹಿಸಲಿದೆ ಎಂದು ನುಡಿದರು.ರಾಷ್ಟ್ರದಲ್ಲಿ ಚುನಾವಣೆಗಳು ನಿಗದಿತ ಸಮಯದಲ್ಲಿ ನಡೆಯಲಿದೆ ಎಂದು ಸ್ಪಷ್ಟ ಪಡಿಸಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೀವು ಸ್ಫರ್ಧಿಸುವಿರೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಆ ಕುರಿತು ಸಮಯ ಬಂದಾಗ ನಿರ್ಧರಿಸುವುದಾಗಿ ಹೇಳಿದರು. |
|