ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲಂಕೆಯಿಂದ ತಮಿಳರ ಸುರಕ್ಷೆಯ ಭರವಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಕೆಯಿಂದ ತಮಿಳರ ಸುರಕ್ಷೆಯ ಭರವಸೆ
ಶ್ರೀಲಂಕಾದಲ್ಲಿರುವ ತಮಿಳು ಮೂಲನಿವಾಸಿಗಳ ಸುರಕ್ಷೆ ಮತ್ತು ಭದ್ರತೆಯ ಕುರಿತು ಭರವಸೆ ನೀಡಿರುವ ಶ್ರೀಲಂಕಾ ಸರ್ಕಾರ, ತೊಂದರೆ ಪೀಡಿತ ಮಂದಿಗೆ ಭಾರತದ ವೈದ್ಯಕೀಯ ಸಹಾಯ ಒದಗಿಸಲು ಅನುವು ನೀಡಲು ಸಿದ್ಧ ಎಂದು ಹೇಳಿದೆ.

ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷೆಯವರ ವಿಶೇಷ ಸಲಹಾಗಾರರಾಗಿರುವ ಬಾಸಿಲ್ ರಾಜಪಕ್ಷೆ ಅವರು ಭಾನುವಾರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆ ವೇಳೆ ತಮಿಳರ ಹಕ್ಕುಗಳೊಂದಿಗೆ ರಾಜಿಮಾಡಿಕೊಂಡಿಲ್ಲ ಎಂಬುದನ್ನು ಖಚಿತ ಪಡಿಸಲು ಸರಕಾರವು ಕ್ರಮಗಳನ್ನು ಕೈಗೊಂಡಿದೆ ಎಂದು ನುಡಿದರು.

ಬಾಸಿಲ್ ಅವರು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರೊಂದಿಗೂ ಮಾತುಕತೆ ನಡೆಸಿದರು.

ಪ್ರಣಬ್ ಮುಖರ್ಜಿಯವರು ಶ್ರೀಲಂಕಾ ತಮಿಳರ ಸಮಸ್ಯೆಯ ಹಿನ್ನೆಲೆಯಲ್ಲಿ ಶ್ರೀಲಂಕಾಗೆ ಭೇಟಿ ನೀಡಲಿದ್ದಾರೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಬಾಸಿಲ್ "ಈ ಕುರಿತು ತಾನು ಅವರೊಂದಿಗೆ ಚರ್ಚಿಸಿಲ್ಲ" ಎಂದು ನುಡಿದರು.

ಶ್ರೀಲಂಕಾದಲ್ಲಿನ ಮಾನವೀಯ ಸ್ಥಿತಿಗತಿಗಳ ಕುರಿತು ಭಾರತವು ಕಳವಳ ವ್ಯಕ್ತಪಡಿಸಿದ್ದು, ಅಲ್ಲಿನ ತಮಿಳು ನಾಗರಿಕರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಬಾಸಿಲ್ ನವದೆಹಲಿಗೆ ಆಗಮಿಸಿದ್ದಾರೆ.

ಪ್ರಣಬ್ ಚೆನ್ನೈಗೆ
ಶ್ರೀಲಂಕಾ ತಮಿಳರ ರಕ್ಷಣೆಗೆ ಕ್ರಮಕೈಗೊಳ್ಳಲು ಡಿಎಂಕೆ ನೀಡಿರುವ ಗಡುವಿಗೆ ಇನ್ನು ಮೂರು ದಿನಗಳು ಬಾಕಿ ಇರುವಂತೆ, ಪ್ರಣಬ್ ಮುಖರ್ಜಿ ಭಾನುವಾರ ಚೆನ್ನೈಗೆ ಧಾವಿಸಿದ್ದಾರೆ. ಶ್ರೀಲಂಕಾದ ತಮಿಳರ ಸುರಕ್ಷೆಯ ಕುರಿತು ಕೈಗೊಳ್ಳಲಾದ ಕ್ರಮಗಳ ಬಗ್ಗೆ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಪ್ರಣಬ್ ವಿವರಣೆ ನೀಡಲಿದ್ದಾರೆ.

ಬಾಸಿಲ್ ಅವರೊಂದಿಗೆ ಮಾತುಕತೆಯ ಬಳಿಕ ಮುಖರ್ಜಿಯವರನ್ನು ಚೆನ್ನೈಗೆ ಕಳುಹಿಸಲು ಯುಪಿಎಯ ಉನ್ನತ ನಾಯಕತ್ವ ನಿರ್ಧರಿಸಿದೆ.

ಈ ಭೇಟಿಯು ಪೂರ್ವನಿಗದಿಯಾಗಿರಲಿಲ್ಲ. ಬಾಸಿಲ್ ಅವರೊಂದಿಗೆ ಮಾತುಕತೆಯ ಬಳಿಕ ದಿಢೀರ್ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನವದೆಹಲಿಯ ಮೂಲಗಳು ಹೇಳಿವೆ.

ಏತನ್ಮಧ್ಯೆ, ಕರುಣಾನಿಧಿಯವರಿಗೆ ದೂರವಾಣಿ ಕರೆ ನೀಡಿರುವ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಮುಖರ್ಜಿ ಅವರು ಎಲ್ಲ ವಿವರಣೆ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಪ್ರತಿಯಾಗಿ ಕರುಣಾನಿಧಿ ಅವರು, ಸೋನಿಯಾ, ಪ್ರಧಾನಿ ಮನಮೋಹನ್ ಸಿಂಗ್, ಹಾಗೂ ಮುಖರ್ಜಿ ಅವರುಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಅಕ್ಟೋಬರ್ 14ರಂದು ಚೆನ್ನೈಯಲ್ಲಿ ನಡೆದ ಸರ್ವಪಕ್ಷದ ಸಭೆಯಲ್ಲಿ ಶ್ರೀಲಂಕಾ ತಮಿಳರ ಹಿತರಕ್ಷಣೆಗಾಗಿ ಕೇಂದ್ರವು ಕ್ರಮಕೈಗೊಳ್ಳದಿದ್ದರೆ, ಡಿಎಂಕೆಯ ಎಲ್ಲ ಸದಸ್ಯರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಲಾಗಿತ್ತು. ಅಂತೆಯೇ ಎಲ್ಲ ಸಂಸತ್ ಸದಸ್ಯರು ತಮ್ಮ ರಾಜೀನಾಮೆ ಪತ್ರಗಳನ್ನು ಕರುಣಾನಿಧಿಯವರಿಗೆ ಒಪ್ಪಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕಿಸ್ತಾನ ಗಂಭೀರ ಸಂಕಟ ಎದುರಿಸುತ್ತಿದೆ: ಪಿಎಂ
ಹಗರಣ: ಸಿಕ್ಕಿಂ ಮಾಜಿ ಸಿಎಂಗೆ ಜೈಲು ಶಿಕ್ಷೆ
ನಾಸಿಕ್: ಎಬಿವಿಪಿ ಕಚೇರಿ ಮೇಲೆ ದಾಳಿ
ವಾಯುಪಡೆಗೆ ನೂತನ ಯುದ್ಧ ವಿಮಾನ: ಆಂಟನಿ
ಮಾಲೆಗಾಂವ್ ಸ್ಫೋಟ: ಇಬ್ಬರು ಮಾಜಿ ಸೇನಾಧಿಕಾರಿಗಳ ವಶ
ವಾಯುಪಡೆಯಲ್ಲಿ ರಾಡಾರ್ ಕೊರತೆ ಇದೆ: ಆಂಟನಿ