ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎಡಪಕ್ಷಗಳಿಗೆ 'ಅಮೆರಿಕ ಫೋಬಿಯಾ' :ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಡಪಕ್ಷಗಳಿಗೆ 'ಅಮೆರಿಕ ಫೋಬಿಯಾ' :ಪ್ರಣಬ್
PTI
ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ವಿರೋಧಿಸುತ್ತಿರುವ ಎಡಪಕ್ಷಗಳು 'ಅಮೆರಿಕ ಫೋಬಿಯಾ' ದಿಂದ ಬಳಲುತ್ತಿವೆ ಎಂಬುದಾಗಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಗೇಲಿ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಅಣು ಒಪ್ಪಂದದ ಕುರಿತಾದ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಕೆಲವು ಜನರಿಗೆ ಹೈಡ್ರೋಫೋಬಿಯಾ ಇರುವಂತೆ ಎಡಪಕ್ಷಗಳಿಗೆ ಅಮೆರಿಕ ಫೋಬಿಯಾ ಇದೆ. ಅಮೆರಿಕವು ತಂತ್ರಜ್ಞಾನದಲ್ಲಿ ಮುಂದುವರಿದಂತ ರಾಷ್ಟ್ರವಾಗಿದ್ದು, ಅಂತಹ ಸುಧಾರಿತ ತಂತ್ರಜ್ಞಾನದ ಆವಶ್ಯಕತೆ ಭಾರತಕ್ಕೂ ಇದೆ ಎಂಬುದನ್ನು ಎಡಪಕ್ಷಗಳು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.

ಅಣು ಒಪ್ಪಂದದ ಕುರಿತಂತೆ ವಿಸ್ತೃತವಾಗಿ ವಿವರಿಸಲು ಜುಲೈ 18,2005ರಿಂದ ಎಡಪಕ್ಷಗಳೊಂದಿಗೆ ತಾನು ಎಂಟು ಸಭೆಗಳನ್ನು ನಡೆಸಿರುವುದಾಗಿ ಸೂಚಿಸಿದ ಪ್ರಣಬ್, 39 ವರ್ಷದ ಸಂಸತ್ತಿನಲ್ಲಿ ಕೇವಲ ವಿದೇಶಾಂಗ ನೀತಿ ವಿಚಾರಕ್ಕೆ ಸಂಬಂಧಿಸಿ ಇಷ್ಟೊಂದು ಸಭೆಯನ್ನು ನಡೆಸಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ತಿಳಿಸಿದ್ದಾರೆ.

ಒಪ್ಪಂದದ ಕುರಿತಾಗಿ ತಾನೇ ನಿರ್ಧಾರ ಕೈಗೊಳ್ಳುವ ಮೂಲಕ ಸರಕಾರವು ಸಂಸತ್ತನ್ನು ಕಡೆಗಣಿಸಿದೆ ಎಂಬ ಎಡಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಪ್ರಣಬ್, ಅಣು ಒಪ್ಪಂದದ ಕುರಿತಾದ ಪ್ರತಿ ಹಂತವನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಯಾಣಿಕರಿಗೆ ಗುಂಡಿಕ್ಕಿದಾತ ಪೊಲೀಸ್ ಗುಂಡುದಾಳಿಗೆ ಬಲಿ
ಯುಪಿಎ ಸರಕಾರಕ್ಕೆ ಸಮಸ್ಯೆ ನೀಡುವುದಿಲ್ಲ:ಡಿಎಂಕೆ
ಲಂಕೆಯಿಂದ ತಮಿಳರ ಸುರಕ್ಷೆಯ ಭರವಸೆ
ಪಾಕಿಸ್ತಾನ ಗಂಭೀರ ಸಂಕಟ ಎದುರಿಸುತ್ತಿದೆ: ಪಿಎಂ
ಹಗರಣ: ಸಿಕ್ಕಿಂ ಮಾಜಿ ಸಿಎಂಗೆ ಜೈಲು ಶಿಕ್ಷೆ
ನಾಸಿಕ್: ಎಬಿವಿಪಿ ಕಚೇರಿ ಮೇಲೆ ದಾಳಿ