ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾಟೀಲ್‌ಗೆ ಬಿಹಾರ ಮುಖ್ಯಮಂತ್ರಿ ತಿರುಗೇಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಟೀಲ್‌ಗೆ ಬಿಹಾರ ಮುಖ್ಯಮಂತ್ರಿ ತಿರುಗೇಟು
ಮುಂಬೈಯ ನಗರಸಾರಿಗೆ ಬೆಸ್ಟ್ ಬಸ್‌ನಲ್ಲಿ ಬಿಹಾರದ ಯುವಕನೊಬ್ಬ ಗದ್ದಲವೆಬ್ಬಿಸಿ ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾದ ಪ್ರಕರಣವೀಗ ರಾಜಕೀಯ ವಿವಾದ ಹುಟ್ಟುಹಾಕಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್.ಪಾಟೀಲ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಉನ್ನತ ಸ್ಥಾನದಲ್ಲಿರುವ ಜನತೆ ಈ ರೀತಿಯ ಹೇಳಿಕೆಗಳನ್ನು ನೀಡಬಾರದು. ಗಾಯಕ್ಕೆ ಮುಲಾಮು ಸವರುವ ಬದಲು ಕಿಚ್ಚಿಗೆ ಇಂಧನ ಸುರಿಯುತ್ತಿದ್ದಾರೆ ಎಂದು ನಿತೀಶ್ ಆರೋಪಿಸಿದ್ದಾರೆ.

"ಪೊಲೀಸರು ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ಯಾರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೋ ಅವರಿಗೆ ಇದುವೇ ಮದ್ದು" ಎಂಬುದಾಗಿ ಘಟನೆಯ ಬಗ್ಗೆ ಸೋಮವಾರ ಪಾಟೀಲ್ ಹೇಳಿದ್ದರು.

ಪೊಲೀಸರ ಗುಂಡಿಗೆ ಬಲಿಯಾದ ಯುವಕ ರಾಹುಲ್ ರಾಜ್‌ನ ಮೃತದೇಹವನ್ನು ಮಂಗಳವಾರ ಪಾಟ್ನಾಗೆ ಒಯ್ಯಲಾಗುವುದು. ಇದಕ್ಕೂ ಮುನ್ನ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.

ಏತನ್ಮಧ್ಯೆ, ಘಟನೆಯ ತನಿಖೆ ನಡೆಸಲು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಆದೇಶಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆಯ ವರದಿಯನ್ನು ಆದಷ್ಟು ಬೇಗ ಸಲ್ಲಿಸುವಂತೆ ರಾಜ್ಯ ಮುಖ್ಯಕಾರ್ಯದರ್ಶಿಯವರಿಗೆ ದೇಶ್ ಮುಖ್ ಹೇಳಿದ್ದಾರೆ.

ಸೋಮವಾರ ಮುಂಬೈ ಉಪನಗರ ಕುರ್ಲಾದಲ್ಲಿ ಸಾರ್ವಜನಿಕ ಬಸ್ಸೊಂದನ್ನು ಒತ್ತೆಯಾಗಿಸಿಕೊಂಡ ಬಿಹಾರಿ ಯುವಕ, ಬಸ್ಸಿನ ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದ.

ಬಳಿಕ ಈತ ಪೊಲೀಸರ ಗುಂಡೇಟಿಗೆ ಬಲಿಯಾಗಿ ಸಾವನ್ನಪ್ಪಿದ್ದ. ತಾನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆಯನ್ನು ಕೊಲ್ಲಲು ಬಂದಿರುವುದಾಗಿ ಆತ ಪದೇಪದೇ ಹೇಳುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಲೆಗಾಂವ್ ಪ್ರಕರಣ ಭಯಾನಕ: ಕಾಂಗ್ರೆಸ್
ಅವನು ರಾಜ್ ಠಾಕ್ರೆಯನ್ನು 'ಮುಗಿಸಲು' ಬಂದಿದ್ದನಂತೆ
ಎಡಪಕ್ಷಗಳಿಗೆ 'ಅಮೆರಿಕ ಫೋಬಿಯಾ' :ಪ್ರಣಬ್
ಪ್ರಯಾಣಿಕರಿಗೆ ಗುಂಡಿಕ್ಕಿದಾತ ಪೊಲೀಸ್ ಗುಂಡುದಾಳಿಗೆ ಬಲಿ
ಯುಪಿಎ ಸರಕಾರಕ್ಕೆ ಸಮಸ್ಯೆ ನೀಡುವುದಿಲ್ಲ:ಡಿಎಂಕೆ
ಲಂಕೆಯಿಂದ ತಮಿಳರ ಸುರಕ್ಷೆಯ ಭರವಸೆ