ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರತ್ಯಕ್ಷದರ್ಶಿಗಳ ಅಸಮಂಜಸ ಹೇಳಿಕೆ: ಆರೋಪಿ ಖುಲಾಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತ್ಯಕ್ಷದರ್ಶಿಗಳ ಅಸಮಂಜಸ ಹೇಳಿಕೆ: ಆರೋಪಿ ಖುಲಾಸೆ
ಕೊಲೆ ಅಥವ ಇತರ ಪ್ರಕರಣಗಳಲ್ಲಿ ಪ್ರತ್ಯಕ್ಷದರ್ಶಿಗಳೆಂದು ಹೇಳಿಕೊಳ್ಳುವವರು ನೀಡುವ ಹೇಳಿಕೆಗಳಲ್ಲಿ ಹೊಂದಾಣಿಕೆಗಳಿಲ್ಲದಿರುವುದು ಆರೋಪಿಯನ್ನು ನಿರ್ದೋಷಿಯನ್ನಾಗಿಸಲು ಪ್ರಮುಖ ಆಧಾರ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದ ಪ್ರಕರಣ ಒಂದರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಅಪಾರಾಧಿಯನ್ನು ನಿರ್ದೋಷಿ ಎಂಬುದಾಗಿ ತೀರ್ಪಿತ್ತಿರುವುದನ್ನು ಪ್ರಶ್ನಿಸಿ ಮಧ್ಯಪ್ರದೇಶ ಸರಕಾರ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ಮೇಲಿನ ತೀರ್ಪು ನೀಡಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆಯಾಧಾರದಲ್ಲಿ ಸತ್ರ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಹೈಕೋರ್ಟ್‌ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಮೇಲೆ ಅಪನಂಬಿಕೆ ಉಂಟಾಗಿರುವ ಕಾರಣ ಆರೋಪಿಗಳನ್ನು ದೋಷಮುಕ್ತಿ ಮಾಡಿತ್ತು.

ಮೃತ ವ್ಯಕ್ತಿಯ ಪತ್ನಿ ಸೋಮ್ತಿ ಬಾಯ್ ಎಂಬಾಕೆ ಪ್ರಕರಣದ ಪ್ರತ್ಯಕ್ಷದರ್ಶಿಯಾಗಿದ್ದು, ಆಕೆಯ ಹೇಳಿಕೆಯಲ್ಲಿ ಸಾಕಷ್ಟು ವೈರುಧ್ಯಗಳು ಮತ್ತು ಖಚಿತತೆ ಇಲ್ಲದಿರುವುದು ಕಂಡು ಬರುವ ಕಾರಣ ಆರೋಪಿ ಮಕಾನ್ ಹಾಗೂ ಇತರರನ್ನು ನಿರ್ದೋಷಿಗಳೆಂದು ತೀರ್ಮಾನಿಸಲಾಗಿತ್ತು.

ಪ್ರಥಮ ಮಾಹಿತಿ ವರದಿಯಲ್ಲಿ ಈಕೆಯ ಪತಿ ಮಕಾನ್ ಎಂಬಾತನನ್ನು ಕಂಜಿ ಹೌಸ್ ಬಜಾರ್ ಬೊಹಲ್ಲದಲ್ಲಿ ಕೊಲೆ ಮಾಡಲಾಗಿದೆ ಎಂದು ದಾಖಲಾಗಿದೆ. ಆದರೆ ವಿಚಾರಣೆ ವೇಳೆಗೆ, ತನ್ನ ಪತಿಯನ್ನು ದಿಯೊಲಿಯಲ್ಲಿರುವ ಗ್ರಾಮಪಂಚಾಯತ್ ಸರಪಂಚನ ನಿವಾಸದಲ್ಲಿ ಕೊಲೆ ಮಾಡಲಾಗಿದೆ ಎಂಬ ಹೇಳಿಕೆ ನೀಡಿದ್ದಳು.

ಇನ್ನೋರ್ವ ಪ್ರತ್ಯಕ್ಷದರ್ಶಿ ಲಚ್ಚು ಬಾಯ್ ನೀಡಿರುವ ಹೇಳಿಕೆಯಲ್ಲಿ ಸರಪಂಚನ ಮನೆಯಿಂದ ಬರುತ್ತಿರುವ ವೇಳೆ ದಾರಿಯಲ್ಲಿ ಈ ಕೊಲೆ ಮಾಡಲಾಗಿದೆ. ಅದಲ್ಲದೆ ಕತ್ತಲಿದ್ದ ಕಾರಣ ಯಾವುದೇ ವ್ಯಕ್ತಿಗಳನ್ನು ಗುರುತಿಸಲಾಗಿಲ್ಲ ಎಂದೂ ಆತ ಹೇಳಿದ್ದಾನೆ.

ಇನ್ನೋರ್ವ ಮನಿಯಾ ಬಾಯ್ ಎಂಬಾಕೆ ನೀಡಿರುವ ಹೇಳಿಕೆಯಲ್ಲಿ, ಆರೋಪಿಯು ಮೃತನ ಮೇಲೆ ಮುಷ್ಠಿಯಿಂದ ಗುದ್ದಿದ್ದು, ಕಪಾಳಕ್ಕೆ ಏಟು ನೀಡಿದ್ದ ಎಂದು ಹೇಳಿದ್ದರೆ, ಪಾಟೀ ಸವಾಲಿನ ವೇಳೆ ಸೋಮ್ತಿಬಾಯ್ ಆಕೆಯ ಪತಿಯ ಮೇಲೆ ಹಲ್ಲೆ ನಡೆದಿರುವುದಾಗಿ ತಿಳಿಸಿದ್ದಳು ಎಂದು ಹೇಳಿದ್ದಳು.

ಈ ಎಲ್ಲ ಅಂಶಗಳನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ಆರೋಪಿಗಳನ್ನು ನಿರ್ದೋಷಿ ಎಂದು ಪಾಸು ಮಾಡಿರುವ ಹೈ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್‌ನಿಂದ ಆರೆಸ್ಸೆಸ್‌ನತ್ತ ಜಿಗಿದಿದ್ದ ಪ್ರಗ್ಯಾ ಸಿಂಗ್ ತಂದೆ
ಪಾಟೀಲ್‌ಗೆ ಬಿಹಾರ ಮುಖ್ಯಮಂತ್ರಿ ತಿರುಗೇಟು
ಮಾಲೆಗಾಂವ್ ಪ್ರಕರಣ ಭಯಾನಕ: ಕಾಂಗ್ರೆಸ್
ಅವನು ರಾಜ್ ಠಾಕ್ರೆಯನ್ನು 'ಮುಗಿಸಲು' ಬಂದಿದ್ದನಂತೆ
ಎಡಪಕ್ಷಗಳಿಗೆ 'ಅಮೆರಿಕ ಫೋಬಿಯಾ' :ಪ್ರಣಬ್
ಪ್ರಯಾಣಿಕರಿಗೆ ಗುಂಡಿಕ್ಕಿದಾತ ಪೊಲೀಸ್ ಗುಂಡುದಾಳಿಗೆ ಬಲಿ