ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈ ರೈಲಿನಲ್ಲಿ ಹಲ್ಲೆಗೀಡಾದ ಯುಪಿ ಕಾರ್ಮಿಕನ ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ರೈಲಿನಲ್ಲಿ ಹಲ್ಲೆಗೀಡಾದ ಯುಪಿ ಕಾರ್ಮಿಕನ ಸಾವು
ಮುಂಬೈಯಲ್ಲಿ ನಡೆಯುತ್ತಿರುವ ಉತ್ತರ ಭಾರತೀಯರ ವಿರುದ್ಧದ ದ್ವೇಷದ ಪರಿಣಾಮ ಉತ್ತರಪ್ರದೇಶದ 25ರ ಹರೆಯದ ಕಾರ್ಮಿಕನೊಬ್ಬ ಬಲಿಯಾಗಿರುವ ದಾರುಣ ಘಟನೆ ಮಂಗಳವಾರ ಸಂಭವಿಸಿದೆ.

"ಬದಲ್‌ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದ ಧರ್ಮದೇವ್ ರಾಯ್ ಎಂಬಾತ ಆಸ್ಪತ್ರೆಗೆ ದಾಖಲಿಸಿದ ಎರಡ್ಮೂರು ಗಂಟೆಯಲ್ಲೇ ಸಾವನ್ನಪ್ಪಿದ. ಯಾವುದೇ ಬಾಹ್ಯ ಗಾಯಗಳಿರಲಿಲ್ಲ. ಆತ ಇತರ ನಾಲ್ಕು ಮಂದಿ ಉತ್ತರ ಭಾರತೀಯರೊಂದಿಗೆ ಸಿಎಸ್‌ಟಿ ರೈಲಿಗೆ ಖೊಪೋಲಿ ನಿಲ್ದಾಣದಲ್ಲಿ ಏರಿದ್ದ. ಸುಮಾರು 10ರಿಂದ 12 ಮಂದಿಯಿದ್ದ ಗುಂಪೊಂದು ಇವರಿಗೆ ಮುಷ್ಟಿಯಿಂದ ಗುದ್ದಿ, ತುಳಿದು ಹಲ್ಲೆ ನಡೆಸಿತು. ಹಲ್ಲೆಗೀಡಾದವರು ಬದ್ಲಪುರ ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದು, ಧರ್ಮುದೇವ್‌ನನ್ನು ದುಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾದ ಸುಮಾರು ಎರಡ್ಮೂರು ಗಂಟೆಯಲ್ಲೇ ಆತ ಸಾವನ್ನಪ್ಪಿದ" ಎಂಬುದಾಗಿ ರೈಲ್ವೇ ಪೊಲೀಸ್ ಆಯುಕ್ತ ಎ.ಕೆ.ಶರ್ಮಾ ಹೇಳಿದ್ದಾರೆ.

ಇದೊಂದು ದ್ವೇಷದ ಹಲ್ಲೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶರ್ಮಾ, "ಧರ್ಮದೇವ್ ನೊಂದಿಗಿದ್ದ ಇತರ ಮೂವರು ಹೇಳುವಂತೆ, ಹಲ್ಲೆ ನಡೆಸಿದವರು ಮರಾಠಿ ಮಾತನಾಡುತ್ತಿದ್ದರು" ಎಂದು ಹೇಳಿದರು. ಸಾವಿಗೀಡಾದ ಯುವಕ ಹಾಗೂ ಆತನ ಜತೆಗಿದ್ದವರು ಖೊಪೋಲಿಯ ಫ್ಯಾಕ್ಟರಿಯೊಂದರ ಕಾರ್ಮಿಕರಾಗಿದ್ದು, ಅವರು ಉತ್ತರ ಪ್ರದೇಶದ ತಮ್ಮ ಊರಿಗೆ ತೆರಳುತ್ತಿದ್ದರು.

ವೀರೇದಂರ್ ರಾಮ್‌ಗೋಪಾಲ್ ವರ್ಮಾ, ಸತ್ಯಪ್ರಕಾಶ್ ಕೌಶಲ್ ರಾಯ್ ಮತ್ತು ಶಿವಕುಮಾರ್ ವರ್ಮಾ ಹಾಗೂ ಸಾವಿಗೀಡಾದ ಧರ್ಮದೇವ್ ಅವರುಗಳು ಉತ್ತರ ಪ್ರದೇಶದ ಗೋರಕ್‌ಪುರ ಜಿಲ್ಲೆಯ ಗೌರಿ ಘಾಟ್‌ಗೆ ಸೇರಿದವರಾಗಿದ್ದಾರೆ.

ಈ ಯುವಕರು ಮತ್ತು ರೈಲಿನಲ್ಲಿದ್ದ ಮರಾಠಿ ಮಾತನಾಡುತ್ತಿದ್ದ ಯುವಕರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಇವರು ಹಲ್ಲೆಗೊಳಗಾದರು ಎಂಬುದಾಗಿ ವರ್ಮಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಲೆಗಾಂವ್ ಸ್ಫೋಟ: ಮತ್ತಿಬ್ಬರ ಬಂಧನ
ಬಿಹಾರದ ನಾಯಕರು ಸ್ವಯಂ ವಿಮರ್ಶಿಸಿಕೊಳ್ಳಲಿ: ಉದ್ಭವ್
ಪ್ರತ್ಯಕ್ಷದರ್ಶಿಗಳ ಅಸಮಂಜಸ ಹೇಳಿಕೆ: ಆರೋಪಿ ಖುಲಾಸೆ
ಕಾಂಗ್ರೆಸ್‌ನಿಂದ ಆರೆಸ್ಸೆಸ್‌ನತ್ತ ಜಿಗಿದಿದ್ದ ಪ್ರಗ್ಯಾ ಸಿಂಗ್ ತಂದೆ
ಪಾಟೀಲ್‌ಗೆ ಬಿಹಾರ ಮುಖ್ಯಮಂತ್ರಿ ತಿರುಗೇಟು
ಮಾಲೆಗಾಂವ್ ಪ್ರಕರಣ ಭಯಾನಕ: ಕಾಂಗ್ರೆಸ್