ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾರುಕಟ್ಟೆ ಕುಸಿತ: ಮಹಿಳೆಯ ಆತ್ಮಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುಕಟ್ಟೆ ಕುಸಿತ: ಮಹಿಳೆಯ ಆತ್ಮಹತ್ಯೆ
ಶೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿದ ವ್ಯಕ್ತಿಯೊಬ್ಬನ ಪತ್ನಿ, ಸಾಲಗಾರರ ಉಪಟಳ ಹೆಚ್ಚಿದ ಕಾರಣ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.

ತನ್ನ ಆಭರಣಗಳನ್ನು ಮಾರಿ ಸಾಲ ತೀರಿಸಿ ಎಂಬುದಾಗಿ ತನ್ನ ಪತಿಗೆ ಚೀಟಿ ಬರೆದಿಟ್ಟಿರುವ ಕಿಂಜಾಲ್ ಶಾ ಎಂಬ 26ರ ಹರೆಯದ ಮಹಿಳೆ ಫ್ಯಾನಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಆಕೆಯ ಪತಿ ಶೈಲೇಶ್ ಶಾ ಶೇರು ಮಾರುಕಟ್ಟೆಯಲ್ಲಿ ಭಾರೀ ಹೂಡಿಕೆ ಮಾಡಿದ್ದು, ಇತ್ತೀಚಿನ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರೀ ನಷ್ಟ ಅನುಭವಿಸಿದ್ದರು.

ಏಳು ವರ್ಷದ ಹಿಂದೆ ವಿವಾಹ ಬಂಧನಕ್ಕೀಡಾಗಿದ್ದ ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಇವರು ಇಲ್ಲಿನ ವೇಜಲ್ಪುರದ ದೇವಶ್ ಅಪಾರ್ಟ್‌ಮೆಂಟಿನಲ್ಲಿ ನೆಲೆಸಿದ್ದರು. ಶೈಲೇಶ್ ಶೇರು ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೆ, ಕಿಂಜಾಲ್, ಸೋಲಾ ಎಂಬಲ್ಲಿ ಖಾಸಗೀ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಶೇರು ಮಾರುಕಟ್ಟೆ ಕುಸಿತದಿಂದಾಗಿ ಶೈಲೇಶ್ ದೊಡ್ಡ ಮೊತ್ತವನ್ನು ಕಳೆದುಕೊಂಡಿದ್ದು, ಸಾಲಗಾರರು ಮನೆಬಾಗಿಲು ಬಡಿಯತೊಡಗಿದಾಗಲಷ್ಟೆ ಇದು ಕಿಂಜಾಲ್‌ಗೆ ತಿಳಿದಿತ್ತು. ಶೈಲೇಶ್ ಒತ್ತಡದಲ್ಲಿದ್ದ ಕಾರಣ ಕಿಂಜಾಲ್ ಸಹ ಮಾನಸಿಕ ವೇದನೆ ಅನುಭವಿಸುತ್ತಿದ್ದರು.

ಸೋಮವಾರ ಸಾಯಂಕಾಲ ಶೈಲೇಶ್ ತಾಯಿ ಅವರನ್ನು ರಾತ್ರಿ ಊಟಕ್ಕೆ ಆಹ್ವಾನಿಸಿದ್ದರು. ಕಿಂಜಾಲ್ ಸಾಯಂಕಾಲ 5.30ರ ವೇಳೆಗೆ ಕಚೇರಿಯಿಂದ ಮರಳಿದ್ದರು. ಶೈಲೇಶ್ ಸುಮಾರು 6.30ರ ವೇಳೆಗೆ ಮನೆಗೆ ತೆರಳಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹಾಗಾಗಿ ಈಕೆ ತಾಯಿ ಮನೆಗೆ ತೆರಳಿರಬಹುದು ಎಂದು ಊಹಿಸಿದ ಶೈಲೇಶ್ ತನ್ನ ತಾಯಿ ಮನೆಗೆ ತೆರಳಿದಾಗ ಅಲ್ಲಿಯೂ ಕಿಂಜಾಲ್ ಇರಲಿಲ್ಲ. ದುಗುಡಗೊಂಡ ಅವರು ಹಿಂತಿರುಗಿ ಬಂದು ಮನೆಯ ಬಾಗಿಲು ಒಡೆದು ನೋಡಿದಾಗ ಆಕೆ ತನ್ನ ದುಪ್ಪಟ್ಟವನ್ನೇ ಕತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ರೈಲಿನಲ್ಲಿ ಹಲ್ಲೆಗೀಡಾದ ಯುಪಿ ಕಾರ್ಮಿಕನ ಸಾವು
ಮಾಲೆಗಾಂವ್ ಸ್ಫೋಟ: ಮತ್ತಿಬ್ಬರ ಬಂಧನ
ಬಿಹಾರದ ನಾಯಕರು ಸ್ವಯಂ ವಿಮರ್ಶಿಸಿಕೊಳ್ಳಲಿ: ಉದ್ಭವ್
ಪ್ರತ್ಯಕ್ಷದರ್ಶಿಗಳ ಅಸಮಂಜಸ ಹೇಳಿಕೆ: ಆರೋಪಿ ಖುಲಾಸೆ
ಕಾಂಗ್ರೆಸ್‌ನಿಂದ ಆರೆಸ್ಸೆಸ್‌ನತ್ತ ಜಿಗಿದಿದ್ದ ಪ್ರಗ್ಯಾ ಸಿಂಗ್ ತಂದೆ
ಪಾಟೀಲ್‌ಗೆ ಬಿಹಾರ ಮುಖ್ಯಮಂತ್ರಿ ತಿರುಗೇಟು