ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಹಾರಿ ಯುವಕ ರಾಹುಲ್ ರಾಜ್ ಅಂತ್ಯಕ್ರಿಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಹಾರಿ ಯುವಕ ರಾಹುಲ್ ರಾಜ್ ಅಂತ್ಯಕ್ರಿಯೆ
PTI
ಸೋಮವಾರ ಮುಂಬೈ ಪೊಲೀಸರ ಗುಂಡೇಟಿನಿಂದಾಗಿ ಸಾವನ್ನಪ್ಪಿದ ಬಿಹಾರಿ ಯುವಕನ ಅಂತ್ಯಕ್ರಿಯೆಯನ್ನು ಮಂಗಳವಾರ ತಡರಾತ್ರಿ ಪಾಟ್ನದಲ್ಲಿ ನಡೆಸಲಾಯಿತು.

ಹಗಲಿನಲ್ಲಿ ಅಂತ್ಯಕ್ರಿಯೆ ನಡೆಸಿದಲ್ಲಿ, ಇದು ಗಲಭೆಗೆ ಕಾರಣವಾಗಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ರಾತ್ರಿಯ ವೇಳೆ ಅಂತ್ಯಕ್ರಿಯೆ ನಡೆಸಲಾಗಿದೆ.

ಕೈಯಲ್ಲಿ ಪಿಸ್ತೂಲ್ ಹಿಡಿದಿದ್ದ ರಾಹುಲ್ ಸೋಮವಾರದಂದು ಮುಂಬೈ ನಗರಸಾರಿಗೆ ಬೆಸ್ಟ್ ಬಸ್ಸನ್ನು ವಶಪಡಿಸಿಕೊಂಡು ಪ್ರಯಾಣಿಕರೊಬ್ಬರನ್ನು ಗಾಯಗೊಳಿಸಿದ್ದ. ಕುರ್ಲಾದಲ್ಲಿ ಬಸ್ಸನ್ನು ವಶಪಡಿಸಿಕೊಂಡಿದ್ದ ರಾಹುಲ್, ತಾನು ಉತ್ತರ ಭಾರತೀಯರ ವಿರೋಧಿ ರಾಜ್ ಠಾಕ್ರೆಯನ್ನು ಮುಗಿಸಲು ಬಂದಿದ್ದೇನೆ ಎಂದು ಪದೇಪದೇ ಹೇಳಿಕೊಳ್ಳುತ್ತಿದ್ದ.

ಈತ ಬಸ್ಸಿನ ನಿರ್ವಾಹಕ ಹಾಗೂ ಪ್ರಯಾಣಿಕರೊಬ್ಬರತ್ತ ಗುಂಡು ಹಾರಿಸಿ ಗಾಯಗೊಳಿಸಿದ್ದ. ಬಳಿಕ ನಡೆಸಿ ಪೊಲೀಸರ ಕಾರ್ಯಾಚರಣೆಯಲ್ಲಿ ರಾಹುಲ್ ಸಾವನ್ನಪ್ಪಿದ್ದ.

ಗುಂಡೇಟು ತಗುಲಿದ ಈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಆತನ ಸೋದರ ಸಂಬಂಧಿ ಹಾಗೂ ಅಜ್ಜಿಗೆ ಹಸ್ತಾಂತರಿಸಲಾಗಿತ್ತು. ವಿಮಾನದಲ್ಲಿ ದೆಹಲಿ ಮುಖಾಂತರ ಸಾಗಿಸಿದ ಮೃತದೇಹವು ರಾತ್ರಿ ಒಂಬತ್ತು ಗಂಟೆಗೆ ಪಾಟ್ನಗೆ ತಲುಪಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರುಕಟ್ಟೆ ಕುಸಿತ: ಮಹಿಳೆಯ ಆತ್ಮಹತ್ಯೆ
ಮುಂಬೈ ರೈಲಿನಲ್ಲಿ ಹಲ್ಲೆಗೀಡಾದ ಯುಪಿ ಕಾರ್ಮಿಕನ ಸಾವು
ಮಾಲೆಗಾಂವ್ ಸ್ಫೋಟ: ಮತ್ತಿಬ್ಬರ ಬಂಧನ
ಬಿಹಾರದ ನಾಯಕರು ಸ್ವಯಂ ವಿಮರ್ಶಿಸಿಕೊಳ್ಳಲಿ: ಉದ್ಭವ್
ಪ್ರತ್ಯಕ್ಷದರ್ಶಿಗಳ ಅಸಮಂಜಸ ಹೇಳಿಕೆ: ಆರೋಪಿ ಖುಲಾಸೆ
ಕಾಂಗ್ರೆಸ್‌ನಿಂದ ಆರೆಸ್ಸೆಸ್‌ನತ್ತ ಜಿಗಿದಿದ್ದ ಪ್ರಗ್ಯಾ ಸಿಂಗ್ ತಂದೆ