ಮಹಾರಾಷ್ಟ್ರದಲ್ಲಿ ಉತ್ತರ ಪ್ರದೇಶದ ವಲಸಿಗನೊಬ್ಬನ ಸಾವನ್ನು 'ಗೌರವ'ದ ಉಲ್ಲಂಘನೆ ಎಂದಿರುವ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್, 'ಎಚ್ಚೆತ್ತುಕೊಳ್ಳುವಂತೆ' ಕಾಂಗ್ರೆಸ್‌ಗೆ ಕರೆ ನೀಡಿದ್ದಾರೆ.
ದೆಹಲಿ, ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಮುಂಬರುವ ಚುನಾವಣೆಗಳ ವೇಳೆ ಜನತೆಯ ಕ್ರೋಧವನ್ನು ಎದುರಿಸುವುದಕ್ಕೆ ಮುಂಚಿತವಾಗಿ ಇಂತಹ ಘಟನೆಗಳಿಗೆ ಇತಿಶ್ರೀ ಹಾಡುವಂತೆ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ಸಂತ ಕಬೀರ ನಗರದ ವಲಸಿಗನ ಮೇಲಿನ ದಾಳಿಯು ಉತ್ತರಪ್ರದೇಶ ಮತ್ತು ಬಿಹಾರದ ಘನತೆಯ ಮೇಲಿನ ದಾಳಿಯಾಗಿದೆ ಎಂದು ಸಿಂಗ್ ವ್ಯಾಖ್ಯಾನಿಸಿದ್ದಾರೆ.
ಮಹಾರಾಷ್ಟ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಎಂಎನ್ಎಸ್ ಮುಖ್ಯಸ್ಥ ರಾಜ್‌ಠಾಕ್ರೆ ಉತ್ತರ ಭಾರತೀಯರ ವಿರುದ್ಧ ಹರಿಹಾಯುವುದನ್ನು ಮುಂದುವರಿಸಿದರೂ, ವಿಲಾಸ್‌ರಾವ್ ದೇಶ್‌ಮುಖ್ ಆಡಳಿತೆಯು ರಾಜ್ ಠಾಕ್ರೆಯನ್ನು 'ಅಳಿಯ'ನಂತೆ ನಡೆಸಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದರು.
ರಾಹುಲ್ ರಾಜ್‌ನನ್ನು ಮುಂಬೈ ಪೊಲೀಸರು ಗುಂಡಿಟ್ಟು ಕೊಂದಿದ್ದರೆ, ರಾಜ್‌ಠಾಕ್ರೆ ವಿರುದ್ಧ ಒಂದು ಸಣ್ಣ ಕೋಲನ್ನೂ ಬಳಸಿಲ್ಲ ಎಂದು ಅವರು ಹೇಳಿದ್ದಾರೆ.
ಮುಂಬರುವ ಲೋಕಸಭಾ ಮತ್ತು ದೆಹಲಿ, ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಜನತೆಯ ಕ್ರೋಧವನ್ನು ಎದುರಿಸುವ ಮುನ್ನ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕು ಎಂದು ಅವರು ನುಡಿದರು.
ಮಂಗಳವಾರ ಮುಂಬೈ ರೈಲಿನಲ್ಲಿ ಉತ್ತರಭಾರತದ ಯುವಕನ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿದ ಅವರು, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಲು ಒತ್ತಾಯಿಸುವುದಾಗಿ ನುಡಿದರು.
ಯುಪಿಎ ತ್ಯಜಿಸುವಂತೆ ಲಾಲೂ, ಪಾಸ್ವಾನ್‌ಗೆ ಒತ್ತಾಯ ಮಹಾರಾಷ್ಟ್ರದಲ್ಲಿ ನಡೆದಿರುವ ಉತ್ತರ ಭಾರತೀಯರ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ ಯುಪಿಎ ಸರಕಾರದ ಮೇಲೆ ಒತ್ತಡ ಹೇರಲು, ಕೇಂದ್ರ ಸಚಿವಸ್ಥಾನ ಹೊಂದಿರುವ ಬಿಹಾರದ ನಾಯಕರಾದ ಲಾಲೂ ಪ್ರಸಾದ್ ಯಾದವ್ ಹಾಗೂ ರಾಮ್ ವಿಲಾಸ್ ಪಾಸ್ವಾನ್ ಅವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಮರ್ ಸಿಂಗ್ ಒತ್ತಾಯಿಸಿದ್ದಾರೆ.
|