ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಸ್ಸಾಂ ಸರಣಿ ಸ್ಫೋಟ: ಕನಿಷ್ಠ 50 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸ್ಸಾಂ ಸರಣಿ ಸ್ಫೋಟ: ಕನಿಷ್ಠ 50 ಸಾವು
ಅಸ್ಸಾಮಿನಲ್ಲಿ ಗುರುವಾರ ನಡೆಸಲಾಗಿರುವ 18ಕ್ಕೂ ಹೆಚ್ಚು ಸರಣಿ ಸ್ಫೋಟಗಳಲ್ಲಿ, 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಪೂರ್ವಾಹ್ನ ಸುಮಾರು ಹನ್ನೊಂದುವರೆ ಗಂಟೆಯ ವೇಳೆಗೆ ಏಕಕಾಲದಲ್ಲಿ ಸ್ಫೋಟ ನಡೆಸಲಾಗಿದೆ. ರಾಜಧಾನಿ ಗುವಾಹತಿಯಲ್ಲಿ ನಾಲ್ಕು ಸ್ಫೋಟಗಳನ್ನು ನಡೆಸಲಾಗಿದ್ದರೆ, ಬಾರ್ಪೇಟ ಮತ್ತು ಕೊಕ್ರಾಜ್‌ನಗರದಲ್ಲಿ ತಲಾ ಮೂರು ಹಾಗೂ ಬೊಂಗಾಯ್‌ಗಾಂವ್‌ನಲ್ಲಿ ಒಂದು ಸ್ಫೋಟ ಸಂಭವಿಸಿದೆ ಎಂದು ಅಧಿಕೃತಮೂಲಗಳು ತಿಳಿಸಿವೆ.
PTI

ಗುವಾಹತಿಯ ಗಣೇಶಗುರಿ ಪ್ರದೇಶದ ಸಚಿವಾಲಯದ ಬಳಿ ಇರುವ ಮೇಲ್ಸೇತುವೆ ಬಳಿಯಲ್ಲಿರುವ ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆಯಲ್ಲಿ ಮೊದಲ ಸ್ಫೋಟ ಸಂಭವಿಸಿತು. ಇದರಿಂದಾಗಿ ಬೆಂಕಿ ಹತ್ತಿಕೊಂಡಿದ್ದು ಇಡೀ ಮಾರುಕಟ್ಟೆ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲಿ ಹೊಗೆ ವ್ಯಾಪಿಸಿಕೊಂಡಿತ್ತು.

ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
  ಕೊಕ್ರಾಜರ್‌ನಲ್ಲಿ ದ್ವಿಚಕ್ರವಾಹನಗಳಲ್ಲಿ ಬಾಂಬ್ ಇರಿಸಿರುವುದಾಗಿ ಸಂಶಯಿಸಲಾಗಿದೆ. ಗಾಯಗೊಂಡಿರುವ ಹಲವಾರು ಮಂದಿಯ ಪರಿಸ್ಥಿತಿ ಗಂಭೀರವಾಗಿರುವ ಕಾರಣ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.      
ಎರಡನೇ ಸ್ಫೋಟವು ಕಾಮರೂಪ ಜಿಲ್ಲಾಧಿಕಾರಿ ಕಚೇರಿ ಬಳಿ ಸಂಭವಿಸಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರಲ್ಲದೆ, ಅಲ್ಲಿ ನಿಲ್ಲಿಸಲಾಗಿದ್ದ ಹಲವಾರು ಕಾರುಗಳು ಧ್ವಂಸಗೊಂಡವು ಎಂದು ಮೂಲಗಳು ತಿಳಿಸಿವೆ.

ಜನನಿಬಿಡ ಪ್ಯಾನ್ಸಿ ಬಜಾರ್‌ನಲ್ಲಿ ಮೂರನೇ ಸ್ಫೋಟ ಸಂಭವಿಸಿದ್ದು, ಇಲ್ಲಿಯೂ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳ ಕಾರ್ಯವೆಸಗುತ್ತಿದೆ ಎಂದು ಗುವಾಹತಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಪಿ.ಸಿಂಗ್ ಅವರು ಹೇಳಿದ್ದಾರೆ.

ಕೊಕ್ರಾಜರ್‌ನಲ್ಲಿ ದ್ವಿಚಕ್ರವಾಹನಗಳಲ್ಲಿ ಬಾಂಬ್ ಇರಿಸಿರುವುದಾಗಿ ಸಂಶಯಿಸಲಾಗಿದೆ. ಗಾಯಗೊಂಡಿರುವ ಹಲವಾರು ಮಂದಿಯ ಪರಿಸ್ಥಿತಿ ಗಂಭೀರವಾಗಿರುವ ಕಾರಣ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸ್ಫೋಟದ ಹಿಂದೆ ಉಗ್ರಗಾಮಿ ಸಂಘಟನೆ ಉಲ್ಫಾ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಹಾರಾಷ್ಟ್ರ ಸರಕಾರ ರಾಜ್‌ಠಾಕ್ರೆಯನ್ನು ಅಳಿಯನಂತೆ ಕಾಣುತ್ತಿದೆ
ಇಂದಿನಿಂದ ಚಿರಂಜೀವಿ ರಾಜಕೀಯ ಯಾತ್ರೆ
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಪಾಸ್ವಾನ್ ಆಗ್ರಹ
ಮಾಲೆಗಾಂವ್ ಶಂಕಿತರು ಪೊಲೀಸ್ ವಶಕ್ಕೆ
ರೈಲಿನಲ್ಲಿ ಹಲ್ಲೆ: ತನಿಖೆಗೆ ಮಾಯಾ ಆದೇಶ
ಬಿಹಾರಿ ಯುವಕ ರಾಹುಲ್ ರಾಜ್ ಅಂತ್ಯಕ್ರಿಯೆ