ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅರುಣಾಚಲ: ಭೂಕುಸಿತದಿಂದ 12 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಣಾಚಲ: ಭೂಕುಸಿತದಿಂದ 12 ಸಾವು
ಅರುಣಾಚಲ ಪ್ರದೇಶದಲ್ಲಿ ಸಂಭವಿಸಿರುವ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಇಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ, ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ ಎಂದು ಸ್ಥಳೀಯ ಶಾಸಕ ಟಿ.ಜಿ.ರಿನ್‌ಪೋಚ್ ಹೇಳಿದ್ದಾರೆ. ಅನಾಹುತದಲ್ಲಿ ಸಾವಿನ ಸಂಖ್ಯೆ ಹೆಚ್ಚುವ ಸಂಭವವಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕ ಘಟನೆಗಳಲ್ಲಿ ಇದುವರೆಗೆ 12 ಮಂದಿ ಸಾವನ್ನಪ್ಪಿದ್ದು, ಗುಡ್ಡ ಜರಿದು ಮನೆಗಳ ಮೇಲೆ ಬಿದ್ದ ಕಾರಣ ಮತ್ತು ಅಕಾಲಿಕ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಿಂದಾಗಿ ಹೆಚ್ಚಿನ ಸಾವು ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಚೀನ ಗಡಿ ಸಮೀಪವಿರುವ ಕಮೆಂಗ್ ಪ್ರದೇಶದಲ್ಲಿ ಹೆಚ್ಚಿನ ಸಾವುನೋವು ಸಂಭವಿಸಿದೆ.

ಭೂಕುಸಿತದಿಂದಾಗಿ ಸುಮಾರು 150ಕ್ಕೂ ಹೆಚ್ಚಿನ ಮನೆಗಳು ಹಾನಿಗೀಡಾಗಿದ್ದು, ರಸ್ತೆ ಹಾಗೂ ಇತರ ಸಂಪರ್ಕಗಳು ಕಡಿದುಕೊಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಸ್ಸಾಂ ಸರಣಿ ಸ್ಫೋಟ: ಹಲವಾರು ಸಾವು
ಮಹಾರಾಷ್ಟ್ರ ಸರಕಾರ ರಾಜ್‌ಠಾಕ್ರೆಯನ್ನು ಅಳಿಯನಂತೆ ಕಾಣುತ್ತಿದೆ
ಇಂದಿನಿಂದ ಚಿರಂಜೀವಿ ರಾಜಕೀಯ ಯಾತ್ರೆ
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಪಾಸ್ವಾನ್ ಆಗ್ರಹ
ಮಾಲೆಗಾಂವ್ ಶಂಕಿತರು ಪೊಲೀಸ್ ವಶಕ್ಕೆ
ರೈಲಿನಲ್ಲಿ ಹಲ್ಲೆ: ತನಿಖೆಗೆ ಮಾಯಾ ಆದೇಶ