ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೇನಾಧಿಕಾರಿ ಬಂಧನದ ಮಾಹಿತಿ ಇಲ್ಲ: ಸೇನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇನಾಧಿಕಾರಿ ಬಂಧನದ ಮಾಹಿತಿ ಇಲ್ಲ: ಸೇನೆ
ಸೆಪ್ಟೆಂಬರ್ 29ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ, ಸೇವೆಯಲ್ಲಿರುವ ಅಧಿಕಾರಿಗಳನ್ನು ಬಂಧಿಸಿದ ಅಥವಾ ತನಿಖೆ ನಡೆಸಿರುವ ಯಾವುದೇ ಅಧಿಕೃತ ಸಂವಹನವನ್ನು ಇದುವರೆಗೆ ಪಡೆದಿಲ್ಲ ಎಂದು ಸೇನೆಯು ಗುರುವಾರ ಹೇಳಿದೆ.

"ಈ ವಿಚಾರದ ಕುರಿತು ನಾವು ಯಾವುದೇ ಅಧಿಕೃತ ವರದಿ ಸ್ವೀಕರಿಸಿಲ್ಲ. ಮಾಧ್ಯಮಗಳ ಮುಖಾಂತರವಷ್ಟೆ ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ" ಎಂದು ಸೇನಾ ಉಪಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎಸ್.ಪಿ.ಎಸ್.ದಿಲ್ಲಾನ್ ಅವರು ಹೇಳಿದ್ದಾರೆ.
ಸ್ಫೋಟಗಳಿಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಕರ್ನಲ್ ಒಬ್ಬರನ್ನು ಮಹಾರಾಷ್ಟ್ರ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಮೇಲಿನಂತೆ ಹೇಳಿದ್ದಾರೆ.

ಈ ಕುರಿತು ಸೇನೆಯು ಸದ್ಯವೇ ಹೇಳಿಕೆಯೊಂದನ್ನು ನೀಡಲಿದೆ ಎಂದು ಅವರು ನುಡಿದರು.

ಈ ವಿಚಾರದ ಕುರಿತು ನಿರ್ದಿಷ್ಟವಾಗಿ ಸಮಗ್ರ ಹೇಳಿಕೆಯೊಂದನ್ನು ನೀಡಲಾಗುವುದು ಮತ್ತು ಇದರಲ್ಲಿ ಸಮಗ್ರ ಅಂಶವನ್ನು ಸೇರಿಸಲಾಗುವುದು ಎಂದು ಅವರನ್ನು ಈ ಕುರಿತು ಪ್ರಶ್ನೆಗಳ ಮೂಲಕ ಕಾಡಿದಾಗ ನುಡಿದರು.

ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ವೇತನ ಆಯೋಗದ ವಿಚಾರವು ಚರ್ಚೆಯ ಕಾರ್ಯಸೂಚಿಯಲ್ಲಿ ಸೇರಿಲ್ಲ ಎಂದು ತಿಳಿಸಿದರು.

ಎ.ವಿ.ಸಿಂಗ್ ಸಮಿತಿಯ ವರದಿಯ ಭಾಗ 2ನ್ನು ಜಾರಿಗೊಳಿಸುವ ಕುರಿತು ಚರ್ಚಿಸಲಾಗುವುದು ಅಲ್ಲದೆ, ಯುದ್ಧ ಸಾಮಾಗ್ರಿಗಳು ಮತ್ತು ಇತರ ಸಾಮಾಗ್ರಿಗಳ ರಕ್ಷಣೆಯ ತಂತ್ರದ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅರುಣಾಚಲ: ಭೂಕುಸಿತದಿಂದ 12 ಸಾವು
ಅಸ್ಸಾಂ ಸರಣಿ ಸ್ಫೋಟ: ಹಲವಾರು ಸಾವು
ಮಹಾರಾಷ್ಟ್ರ ಸರಕಾರ ರಾಜ್‌ಠಾಕ್ರೆಯನ್ನು ಅಳಿಯನಂತೆ ಕಾಣುತ್ತಿದೆ
ಇಂದಿನಿಂದ ಚಿರಂಜೀವಿ ರಾಜಕೀಯ ಯಾತ್ರೆ
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಪಾಸ್ವಾನ್ ಆಗ್ರಹ
ಮಾಲೆಗಾಂವ್ ಶಂಕಿತರು ಪೊಲೀಸ್ ವಶಕ್ಕೆ