ಅಸ್ಸಾಂನಲ್ಲಿ ಗುರುವಾರ ನಡೆದ ಸರಣಿ ಬಾಂಬ್ ಸ್ಫೋಟಗಳ ಹಿಂದೆ ಬಾಂಗ್ಲಾ ಮೂಲದ ಹುಜಿ ಉಗ್ರರ ಕೈವಾಡ ಇರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಆದರೆ ಸ್ಫೋಟ ಕೃತ್ಯವನ್ನು ಎಸಗಿರುವ ಕುರಿತು ಈಗಾಗಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಹ ತಿಳಿಸಿದೆ. ಈ ಸ್ಫೋಟದ ಹಿಂದೆ ಯಾರ ಕೈವಾಡ ಇದೆ ಎಂದು ಕೂಡಲೇ ಹೇಳಲು ಸಾಧ್ಯವಿಲ್ಲ.
ಜೆಹಾದ್ ಹೆಸರಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಬಾಂಗ್ಲಾ ಮೂಲದ ಹುಜಿ ಸಂಘಟನೆ ಈ ಸ್ಫೋಟದ ಹಿಂದಿರಬಹುದು ಎಂದು ರಾಜ್ಯ ಸ್ಪೆಷಲ್ ಬ್ರ್ಯಾಂಚ್‌ನ ಐಜಿಪಿ ಖಾಗೇನ್ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯದಲ್ಲಿ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಆ ನಿಟ್ಟಿನಲ್ಲಿ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದರು.
ಆದರೆ ಸರಣಿ ಸ್ಫೋಟ ನಡೆಸುವಲ್ಲಿ ಉಲ್ಫಾ ಕೂಡ ಇತಿಹಾಸ ಹೊಂದಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಕೆಲವೇ ದಿನಗಳ ಹಿಂದಷ್ಟೇ ಐಎಸ್ಐ ಬೆಂಬಲಿತ ಕೆಲವು ಉಗ್ರರನ್ನು ಸೆರೆ ಹಿಡಿಯಲಾಗಿತ್ತು ಎಂದು ತಿಳಿಸಿದರು.
ಜನನಿಬಿಡ ಪ್ರದೇಶಗಲ್ಲಿ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸುವ ಮೂಲಕ ಜನರಲ್ಲಿ ಭೀತಿ ಮೂಡಿದ್ದು, ಮುಂಜಾಗ್ರತ ಕ್ರಮವಾಗಿ ಎಲ್ಲೆಡೆ ಪೊಲೀಸ್ ಬಂದೋಬಸ್ತ್, ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅವರು ಹೇಳಿದರು. |