ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತಳಾಗಿರುವ ಸಾಧ್ವಿ ಪ್ರಾಗ್ಯಾ ಸಿಂಗ್‌ಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಮಾ ಭಾರತಿ ಅವರ ಭಾರತೀಯ ಜನಶಕ್ತಿ ಪಕ್ಷದ ವತಿಯಿಂದ ಟಿಕೆಟ್ ನೀಡುವುದಾಗಿ ತಿಳಿಸಿದೆ.
ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಯಾವ ಕ್ಷೇತ್ರದಲ್ಲೂ ಸ್ಪರ್ಧಿಸುವುದಾದರು ಪಕ್ಷದ ವತಿಯಿಂದ ಟಿಕೆಟ್ ನೀಡಲಾಗುವುದು ಎಂದು ಬಿಜೆಎಸ್ ರಾಷ್ಟ್ರೀಯ ಕಾರ್ಯದರ್ಶಿ ಇಂದ್ರ ಪ್ರಜಾಪತ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಈ ಕುರಿತು ಈಗಾಗಲೇ ನಾವು ಪ್ರಾಗ್ಯಾ ಸಿಂಗ್ ವಕೀಲರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದು, ಬಿಜೆಪಿಯ ಯಾವುದೇ ಪ್ರಬಲ ವ್ಯಕ್ತಿಯ ವಿರುದ್ಧ ಸ್ಪರ್ಧಿಸಲು ಒಪ್ಪಿದರೆ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಾಧ್ವಿ ನಿಜಕ್ಕೂ ಅಮಾಯಕಳು ಎಂದಿರುವ ಪ್ರಜಾಪತ್, ರಾಜಕೀಯ ಸಂಚಿನಿಂದ ಆಕೆಯನ್ನು ಬಲಿಪಶುವನ್ನಾಗಿ ಮಾಡಲಾಗಿದ್ದು, ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಉಮಾ ಭಾರತಿ ಆಗ್ರಹಿಸಿರುವುದಾಗಿ ತಿಳಿಸಿದರು. |