ಕಾಶ್ಮೀರದಲ್ಲಿ ನಡೆಯಲಿರುವ ಪ್ರಥಮ ಹಂತದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಶುಕ್ರವಾರ ಅಂತ್ಯಗೊಳ್ಳಲಿದೆ.ನವೆಂಬರ್ 17ರಂದು 10 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ ಒಂದರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸಾತಿಗೆ ನವೆಂಬರ್ 3 ಕೊನೆಯ ದಿನಾಂಕ.ಏತನ್ಮಧ್ಯೆ, ಏಳು ಹಂತದ ಚುನಾವಣೆಯಲ್ಲಿ ಭದ್ರತೆಯ ಖಚಿತತೆಗಾಗಿ ಕೇಂದ್ರವು ಅರೆಸೇನಾ ಪಡೆಗಳ 70 ಕಂಪೆನಿಗಳನ್ನು ಜಮ್ಮು ಕಾಶ್ಮೀರ ರಾಜ್ಯಕ್ಕೆ ಕಳುಹಿಸಿದೆ.ಮಂಜೂರಾಗಿರುವ 425 ಕಂಪೆನಿಗಳಲ್ಲಿ ಕೇಂದ್ರವು ಇದುವರೆಗೆ 70 ಕಂಪೆನಿಗಳನ್ನು ಕಳುಹಿಸಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್, ವಿಶೇಷ ಸೇವೆಗಳ ಬ್ಯೂರೋ, ಟಿಬೇಟ್ ಗಡಿ ಪೊಲೀಸ್, ಕ್ಷಿಪ್ರ ಕಾರ್ಯಪಡೆಗಳಿಂದ ಸಿಬ್ಬಂದಿಗಳನ್ನು ಕಳುಹಿಸಲಾಗಿದೆ. ಪ್ರತಿ ಕಂಪೆನಿಯೂ 60 ಸಿಬ್ಬಂದಿಗಳನ್ನು ಹೊಂದಿದ್ದು, ಇವರನ್ನು ಪೂಂಚ್, ರಾಜೌರಿಮತ್ತು ಬಂಡಿಪುರ ಪ್ರದೇಶಗಳಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಕಳುಹಿಸಲಾಗಿದೆ.ರಾಜ್ಯದಲ್ಲಿ 8,109 ಮತಗಟ್ಟೆಗಳಿದ್ದು, ಅವುಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. ಏಳು ಹಂತದ ಚುನಾವಣೆಯಲ್ಲಿ 65ಲಕ್ಷಕ್ಕೂ ಅಧಿಕ ಮಂದಿ ಮತಚಲಾಯಿಸುವ ನಿರೀಕ್ಷೆ ಇದೆ. |
|