ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ವಿರುದ್ಧ ರಾಜದ್ರೋಹ ಆರೋಪ ಹೊರಿಸಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒತ್ತಾಯಿಸಿದ್ದಾರೆ." ದೇಶದಲ್ಲಿ ಪ್ರತಿಯೊಬ್ಬರಿಗೂ ಯಾವುದೇ ಪ್ರದೇಶದಲ್ಲಿ ಹೋಗಿ ನೆಲೆಸುವ ಮತ್ತು ಕೆಲಸ ಮಾಡುವ ಹಕ್ಕಿದೆ. ರಾಜ್ ಠಾಕ್ರೆ ಅವರ ಉತ್ತರ ಭಾರತೀಯ ವಿರೋಧಿ ಹೇಳಿಕೆಗಳು ಮತ್ತು ಕ್ರಮಗಳು ಇತರ ಪ್ರದೇಶಗಳ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ" ಎಂದು ನಿತೀಶ್ ಹೇಳಿದ್ದಾರೆ.ಮುಂಬೈ ಬಸ್ಸಿನಲ್ಲಿ ಉತ್ತರ ಭಾರತೀಯ ಯುವಕ ರಾಹುಲ್ ರಾಜ್ ನಡೆಸಿರುವ ದಾಂಧಲೆ ಎಬ್ಬಿಸಿರುವ ಹಿನ್ನೆಲೆಯಲ್ಲಿ ಆತನನ್ನು ಗುಂಡಿಕ್ಕಿ ಕೊಂದಿರುವ ಪ್ರಕರಣದ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ನಿತೀಶ್, ಪೊಲೀಸರು ರಾಹುಲ್ ಮೇಲೆ ಗುಂಡು ಹಾರಿಸುವ ಬದಲು ಆತನನ್ನು ಬಂಧಿಸಿ ವಿಚಾರಣೆ ನಡೆಸಬಹುದಿತ್ತು ಎಂಬುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಭಿಪ್ರಾಯಿಸಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕಾಗಿದ್ದು, ಈ ಸಂಬಂಧ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. |
|