ಶ್ರೀಲಂಕಾದ ಉತ್ತರ ಭಾಗಗಳಲ್ಲಿ ಸೇನಾಕಾರ್ಯಾಚರಣೆಯಿಂದಾಗಿ ತಮಿಳರು ಸಾವನ್ನಪ್ಪುತ್ತಿರುವುದನ್ನು ಪ್ರತಿಭಟಿಸಿ ದಕ್ಷಿಣ ಭಾರತೀಯ ಕಲಾವಿದರ ಸಂಘಟನೆಯು ಶನಿವಾರ ಒಂದು ದಿನದ ಉಪವಾಸ ಮುಷ್ಕರ ಹೂಡಿದೆ.
ತಮಿಳು ನಟರಾದ ನೆಪೋಲಿಯನ್, ಸತ್ಯರಾಜ್ ವಿಜಯ್, ಅರ್ಜುನ್, ಪಶುಪತಿ ಹಾಗೂ ಮತ್ತಿತರರು ಸಂಘಟನೆಯ ಅಧ್ಯಕ್ಷ ಆರ್.ಶರತ್ ಕುಮಾರ್ ನೇತೃತ್ವದಲ್ಲಿ ಶನಿವಾರ ಮುಂಜಾನೆ ಮುಷ್ಕರ ಆರಂಭಿಸಿದ್ದಾರೆ.
ಶ್ರೀಲಂಕಾದಲ್ಲಿ ಜೀವಿಸುತ್ತಿರುವ ತಮಿಳರಿಗೆ ಐಕಮತ್ಯ ತೋರಲು ಮತ್ತು ಅವರಿಗೆ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶರತ್ ಕುಮಾರ್ ವರದಿಗಾರರಿಗೆ ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಪರಿಸ್ಥಿತಿಯು ಸಹಜತೆಗೆ ಮರಳಬಹುದೆಂಬ ವಿಶ್ವಾಸ ವ್ಯಕ್ತಪಡಿಸಿರುವ ಕುಮಾರ್, ಈ ಕುರಿತು ಸೌಹಾರ್ದ ಪರಿಹಾರ ಕಂಡುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ನುಡಿದರು. |