ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮ್ಮ - ಕಲೈನಾರ್ ನಡುವೆ ಟೆಲಿಗ್ರಾಂ ಯುದ್ಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮ್ಮ - ಕಲೈನಾರ್ ನಡುವೆ ಟೆಲಿಗ್ರಾಂ ಯುದ್ಧ
ND
ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯ್ತಂತೆ ಅಂದಕಾಲತ್ತಿಲ್! ಆದರೆ, ಈಗ ತಮಿಳ್ನಾಡಿನ ಎಐಎಡಿಎಂಕೆ ಮತ್ತು ಡಿಎಂಕೆ ನಡುವಿನ ಜಗಳದಿಂದಾಗಿ ಅಂಚೆ ಇಲಾಖೆ ಉದ್ಧಾರವಾಗುತ್ತಿದೆ!

ತಮಿನ್ನಾಡಿನ 'ಅಮ್ಮ' ಮತ್ತು 'ಅಪ್ಪ' ನಡುವಿನ ಯುದ್ಧವು ಅಂಚೆಕಚೇರಿಗಳ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ ನೀಡಿದೆ. ಕಾರಣ ಅವರ ನಡುವಿನ ಟೆಲಿಗ್ರಾಂ ಯುದ್ಧ.

ಶ್ರೀಲಂಕಾದಲ್ಲಿ ತಮಿಳರ ರಕ್ಷಣೆಗೆ ಕೇಂದ್ರದ ಹಸ್ತಕ್ಷೇಪ ಒತ್ತಾಯಿಸಿ ಪ್ರಧಾನಮಂತ್ರಿ ಕಚೇರಿಗೆ ಸಾವಿರಾರು ತಂತಿ ಸಂದೇಶ ರವಾನಿಸುವ ವ್ಯೂಹ ಕರುಣಾನಿಧಿಯವರದ್ದು. ಹೀಗಿರುವಾಗ ಅಮ್ಮ ಜಯಲಲಿತಾ ಸುಮ್ಮನಿರಲು ಸಾಧ್ಯವೇ?

ಒಬ್ಬಮುಖ್ಯಮಂತ್ರಿಯಾಗಿದ್ದುಕೊಂಡು, ಶ್ರೀಲಂಕಾದಲ್ಲಿ ಕದನ ವಿರಾಮ ಘೋಷಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿರುವ ಕರುಣಾನಿಧಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಟೆಲಿಗ್ರಾಂ ಕಳುಹಿಸಿ ಎಂಬುದಾಗಿ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಹಾಗಾಗಿ ಈಗ ಟೆಲಿಗ್ರಾಮೋ ಟೆಲಿಗ್ರಾಮು.

ಇದೂ ಆರೋಪ ಮುಕ್ತವಾಗಿದೆ ಅಂತಿರಾ? ಊಹುಂ. ರಾಜಕೀಯ ಒತ್ತಡಗಳ ಹಿನ್ನೆಲೆಯಲ್ಲಿ ಅಂಚೆ ಕಚೇರಿಗಳು ಟೆಲಿಗ್ರಾಮ್ ನೀಡಲು ನಿರಾಕರಿಸುತ್ತಿವೆ ಎಂದು ಎಐಎಡಿಎಂಕೆ ದೂರಿದೆ.
PTI


"ತಮ್ಮ ಸಂಸದರ ರಾಜೀನಾಮೆ ನಾಟಕ ಬಳಿಕ ಡಿಎಂಕೆ ಈಗ ಈ ನಾಟಕ ಶುರುಹಚ್ಚಿಕೊಂಡಿದೆ. ಡಿಎಂಕೆ ಮುಖ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಂಚೆ ಕಚೇರಿಯ ಜವಾಬ್ದಾರಿ ಹೊಂದಿರುವ ಡಿಎಂಕೆ ಸದಸ್ಯರಾಗಿರುವ ಕೇಂದ್ರ ಸಚಿವರು ನಮ್ಮ ಟೆಲಿಗ್ರಾಮುಗಳನ್ನು ಸ್ವೀಕರಿಸದಂತೆ ಒತ್ತಡ ಹೇರಿರಬಹುದು" ಎಂದು ಎಐಎಡಿಎಂಕೆ ರಾಜ್ಯಸಭಾ ಸದಸ್ಯ ಡಾ| ವಿ. ಮೈತ್ರೇಯನ್ ಹೇಳಿದ್ದಾರೆ.

ಆದರೆ ಇತ್ತಕಡೆ ಎಂದಿನಂತೆ, ಈ ಆರೋಪವನ್ನು ಆಧಾರ ರಹಿತವೆಂಬುದಾಗಿ ಡಿಎಂಕೆ ಅಲ್ಲಗಳೆದಿದೆ. ಇದೊಂದು ರಾಜಕೀಯ ತಂತ್ರ ಎಂದು ಲೇವಡಿ ಮಾಡಿದೆ.

ಅದೇನೆ ಇರಲಿ, ಕರುಣಾನಿಧಿ ರಾಜೀನಾಮೆಗೆ ಒತ್ತಾಯಿಸಿ ಹರಿದು ಬರುತ್ತಿರುವ ರಾಜೀನಾಮೆಗಳ ಮಹಾಪೂರ ಡಿಎಂಕೆ ಮುಖವನ್ನಂತೂ ಕೆಂಪಾಗಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಮಿಳು ಕಲಾವಿದರಿಂದ ಉಪವಾಸ ಸತ್ಯಾಗ್ರಹ
ಶಿಕ್ಷಣ ಹಕ್ಕು ಮಸೂದೆಗೆ ಸಂಪುಟದ ಹಸಿರು ನಿಶಾನೆ
ರಾಜ್ ವಿರುದ್ಧ ರಾಜದ್ರೋಹ ಆರೋಪಕ್ಕೆ ಒತ್ತಾಯ
ಅಸ್ಸಾಂ ಸ್ಫೋಟದ ಹೊಣೆ ಹೊತ್ತ ಐಎಸ್ಎಫ್-ಐಎಂ
ತಪ್ಪು ಮಾಡಿದ್ದರೆ ಪ್ರಗ್ಯಾಗೆ ಶಿಕ್ಷೆಯಾಗಲಿ: ಆಡ್ವಾಣಿ
ಎಐಎಡಿಎಂಕೆ-ಡಿಎಂಕೆ ಜಟಾಪಟಿ ತಾರಕಕ್ಕೆ