ಬೆಲೆಕಟ್ಟಲಾಗದ ಮಧ್ಯಯುಗೀನ ಕಟ್ಟಡ ಒಂದು ಬಿಲ್ಡರ್‌ಗಳ ದುರಾಸೆಯಿಂದಾಗಿ ನೆಲಕಚ್ಚಿದೆ. 13ನೆ ಶತಮಾನದಲ್ಲಿ ಗಿಯಾಸುದ್ದೀನ್ ಬಲ್ಬನ್ ನಿರ್ಮಿಸಿದ ಕಟ್ಟಡ ಇದಾಗಿತ್ತು. 14ನೆ ಶತಮಾನದಲ್ಲಿ ಅರಬ್ ಯಾತ್ರಿಕ ಇಬ್ನ ಬಟೂಟನಿಗೆ ನೆಲೆ ನೀಡಿದ ತಾಣವೂ ಇದಾಗಿತ್ತು. ಇದೀಗ ಬಹುಮಹಡಿ ಕಟ್ಟಡ ಕಟ್ಟುವ ಬಿಲ್ಡರ್‌ಗಳ ದುರಾಸೆಗೆ ಈಡಾಗಿ ಧ್ವಂಸಗೊಂಡಿದೆ.
ನಿಜಾಮುದ್ದೀನ್‍ನಲ್ಲಿದ್ದ ಈ ಕಟ್ಟಡವನ್ನು ಸರಕಾರ ಮತ್ತು ಇತರ ಪೌರ ಏಜೆನ್ಸಿಗಳು ಪರಂಪರಾ ಕಟ್ಟಡವೆಂದು ಘೋಷಿಸಿದ್ದವು. 1245ರಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡವನ್ನು ಲಾಲ್ ಮಹಲ್ ಅಥವಾ ಕೌಶಾಕಿ ಲಾಲ್ ಎಂದು ಕರೆಯಲಾಗುತ್ತಿತ್ತು. ಇದನ್ನು ದೆಹಲಿ ಸುಲ್ತಾನರ ಕಾಲದಲ್ಲಿ ಬಲ್ಬನ್ ಅಧಿಕಾರ ವಹಿಸುವ ಮುನ್ನ ಸುಲ್ತಾನ್ ನಾಸಿರುದ್ದೀನ್ ಮೊಹಮ್ಮದ್ ಶಾ ನಿರ್ಮಿಸಿದ್ದ.
ಶುಕ್ರವಾರ ಈ ಕಟ್ಟಡವು ಅರೆವಾಸಿ ಧ್ವಂಸವಾಗಿದ್ದ ಸ್ಥಿತಿಯಲ್ಲಿ ಕಂಡುಬಂದಿತ್ತು. ಗುರುವಾರ ತಡರಾತ್ರಿ ಇದನ್ನು ಧ್ವಂಸಮಾಡಿರುವುದಾಗಿ ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಈ ಕುರಿತು ಮಾಹಿತಿ ನೀಡಿದಾಗ ಸರ್ವೇಕ್ಷಣಾ ಇಲಾಖೆಯು ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಅಚ್ಚರಿ ಎಂಬಂತೆ ಬಿಲ್ಡರ್ ಯಾರು ಎಂಬುದು ಯಾರಿಗೂ ತಿಳಿದಿಲ್ಲ.
|