ಮಾವೋವಾದಿಗಳೇ ಹೆಚ್ಚಾಗಿರುವ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಸಲ್ಬೋನಿಯಲ್ಲಿ ನೆಲಬಾಂಬ್ ಸ್ಫೋಟಗೊಂಡಿದ್ದು, ಮಾವೋವಾದಿಗಳ ಪೂರ್ವನಿಯೋಜಿತ ಈ ದಾಳಿಯಿಂದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಮತ್ತು ರಾಜ್ಯ ಉದ್ಯಮ ಸಚಿವ ನಿರುಪಂ ಸೇನ್, ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಬುದ್ಧದೇವ್, ಪಾಸ್ವಾನ್ ಉದ್ಯಮಿ ಸಜ್ಜನ್ ಜಿಂದಲ್ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.ಬಾಂಬ್‌ನ ತೀವ್ರತೆಗೆ ಎಲೆಕ್ಟ್ರಿಕ್ ಹೈಟೆಂಶನ್ ವಿದ್ಯುತ್ ತಂತಿ ಬೆಂಗಾವಲು ವಾಹನವೊಂದರ ಮೇಲೆ ಕಳಚಿ ಬಿದ್ದಿದ್ದು, ಈ ಘಟನೆಯಲ್ಲಿ ಆರು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.ಮಿಡ್ನಾಪುರ ಜಿಲ್ಲೆಯು ನಕ್ಸಲರ ತಾಣವಾಗಿರುವುದರಿಂದ ಇದೊಂದು ನಕ್ಸಲೀಯರ ಪೂರ್ವನಿಯೋಜಿತ ಕೃತ್ಯವೆಂದು ಪೊಲೀಸರು ಶಂಕಿಸಿದ್ದು, ಏನೇ ಆದರೂ, ಭದ್ರತಾ ವ್ಯವಸ್ಥೆಯಲ್ಲಿನ ಲೋಪದ ಕುರಿತಾಗಿ ಪ್ರತಿಕ್ರಯಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. |
|