ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ತಮಿಳುನಾಡು ಸರಕಾರ ನಿಗದಿತ ಸಮಯದೊಳಗಾಗಿ ಕಾರ್ಯಗತಗೊಳಿಸಲಿದೆ ಎಂದು ಸ್ಥಳೀಯಾಡಳಿತ ಸಚಿವ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.1,334 ಕೋಟಿ ರೂಪಾಯಿ ವೆಚ್ಚದ ಹೊಗೇನಕಲ್ ಯೋಜನೆಗೆ ಎಲ್ಲಾ ಪ್ರಾಥಮಿಕ ಕಾರ್ಯಗಳನ್ನು ರಾಜ್ಯ ಸರಕಾರ ನಡೆಸುತ್ತಿದೆ ಎಂದು ನುಡಿದರು. ಅವರು ಜಿಲ್ಲೆಯಲ್ಲಿ 3333 ಸ್ವಸಹಾಯ ಗುಂಪುಗಳಿಗೆ 18 ಕೋಟಿ ರೂಪಾಯಿಯನ್ನು ಆವರ್ತನ ನಿಧಿಯಾಗಿ ವಿತರಿಸುತ್ತಾ ಮಾತನಾಡುತ್ತಿದ್ದರು." ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಜಪಾನ್ ಬ್ಯಾಂಕ್ ನಿಧಿಯ ಸಹಾಯದಿಂದ ನಿರ್ಮಿಸಲುದ್ದೇಶಿಸಲಾಗಿರುವ ಈ ಯೋಜನೆಗೆ ತಮಿಳ್ನಾಡಿನ ಹಾಗೂ ನೆರೆಯ ರಾಜ್ಯಗಳ ಕೆಲವು ರಾಜಕೀಯ ಪಕ್ಷಗಳು ಅಡ್ಡಿಯನ್ನುಂಟುಮಾಡಲು ಪ್ರಯತ್ನಿಸುತ್ತಿವೆ. ಅದೇನೆ ಇದ್ದರೂ, ಜಿಲ್ಲೆಯ ಕುಡಿಯುವ ನೀರಿನ ಅಗತ್ಯ ಪೂರೈಸಲು ಉದ್ದೇಶಿಸಲಾಗಿರುವ ಈ ಯೋಜನೆಯನ್ನು ರಾಜ್ಯ ಸರಕಾರವು ನಿಗದಿಯಂತೆ ಕಾರ್ಯಗತ ಗೊಳಿಸುವ ವಿಶ್ವಾಸವಿದೆ" ಎಂದು ನುಡಿದರು. |
|