ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಮುಖ ಆರೋಪಿಯೊಂದಿಗೆ ಪ್ರಗ್ಯಾ ಸಂಭಾಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಮುಖ ಆರೋಪಿಯೊಂದಿಗೆ ಪ್ರಗ್ಯಾ ಸಂಭಾಷಣೆ
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಬಂಧಿಸಿದಂತೆ ಬಂಧನಕ್ಕೀಡಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ತಲೆತಪ್ಪಿಸಿಕೊಂಡಿರುವ ಸ್ಫೋಟದ ಪ್ರಮುಖ ಆರೋಪಿಯೊಂದಿಗೆ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಸಂಭಾಷಣೆ ವೇಳೆಗೆ ಸಾಧ್ವಿ ಅವರು ಯಾಕೆ ಕಡಿಮೆ ಸಾವುನೋವು ಸಂಭವಿಸಿದೆ ಎಂದು ಪ್ರಶ್ನಿಸಿದರು ಎಂದು ಸರಕಾರಿ ವಕೀಲರು ನಾಸಿಕ್ ನ್ಯಾಯಾಲಯದೆದುರು ಹೇಳಿದ್ದಾರೆ.

ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳದ ವಕೀಲರು ಸಿಜೆಎಂ ಕೆ.ಡಿ.ಬೋಚ್ ಎದುರು ಈ ಅರಿಕೆ ಮಾಡಿದ್ದಾರೆ. ಬೋಚ್ ಎದುರು ಸ್ಫೋಟ ಸಂಬಂಧ ಬಂಧಿಸಲಾಗಿರುವ ಸಾಧ್ವಿ ಹಾಗೂ ಮತ್ತಿಬ್ಬರನ್ನು ಹಾಜರು ಪಡಿಸಲಾಗಿತ್ತು. ಸ್ಫೋಟದ ಪ್ರಮುಖ ಆರೋಪಿ ರಾಮ್‌ಜಿ ಜತೆಗೆ ಸಾಧ್ವಿ ಸುಧೀರ್ಘ ಸಂಭಾಷಣೆ ನಡೆಸಿದ್ದು, ರಾಜ್‌ಜಿ 'ತಾನು ತನ್ನ ಕರ್ತವ್ಯ ಪೂರೈಸಿದ್ದೇನೆ' ಎಂದು ಹೇಳಿರುವುದಾಗಿ ಆಪಾದಿಸಲಾಗಿದೆ.

ಪೊಲೀಸರು ತನ್ನ ಮೋಟಾರ್‌ಸೈಕಲನ್ನು ವಶಪಡಿಸಿಕೊಂಡಿದ್ದಾರೆಯೇ ಎಂದು ರಾಮ್‌ಜಿಯನ್ನು ಪ್ರಶ್ನಿಸಿರುವ ಪ್ರಗ್ಯಾ, ಸ್ಫೋಟದಲ್ಲಿ ಯಾಕೆ ಕಡಿಮೆ ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಶ್ನಿಸಿದ್ದರೆ, "ನನಗೆ ಸೂಕ್ತ ವಾಹನ ನಿಲುಗಡೆ ಸ್ಥಳ ಸಿಕ್ಕಿಲ್ಲ" ಎಂದು ಪ್ರಗ್ಯಾಗೆ ರಾಮ್‌ಜಿ ಉತ್ತರಿಸಿದರೆಂದು ವಕೀಲರು ಹೇಳಿದ್ದಾರೆ.

ಸಾಧ್ವಿ, ಶಿವನಾರಾಯಣ್ ಸಿಂಗ್ ಕಲಾಸಂಗ್ರಾಮ್ ಮತ್ತು ಶ್ಯಾಮ್ ಭವರ್‌ಲಾಲ್ ಸಾಹು ಅವರುಗಳನ್ನು ನವೆಂಬರ್ 17ರ ತನಕ ಮ್ಯಾಜಿಸ್ಟ್ರೇಟ್ ವಶಕ್ಕೆ ನೀಡಲಾಗಿದೆ.

ಸಿಜೆಎಂ ಈ ಕುರಿತು ನಿಮಗೇನಾದರೂ ಹೇಳಲಿದೆಯೇ ಎಂದು ಸಾಧ್ವಿಯನ್ನು ಪ್ರಶ್ನಿಸಿದಾಗ, "ತನಗೆ ಹೇಳಲು ಬಹಳವಿದೆ ಮತ್ತು ಅದು ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ" ಎಂದು ಉತ್ತರಿಸಿದರು.

ತನಗೆ ನ್ಯಾಯ ಸಿಗುತ್ತದೆಯೇ ಎಂದು ನ್ಯಾಯಾಲಯವನ್ನು ಪ್ರಶ್ನಿಸಿದ ಪ್ರಗ್ಯಾ ಕೊಂಚ ಕಾಲ ಪ್ರಜ್ಞಾ ಶೂನ್ಯರಾದರು. ಆದರೆ ನೀರು ಕುಡಿದ ಬಳಿಕ ಸುಧಾರಿಸಿಕೊಂಡರು.

ಪ್ರಕರಣದ ಸಂಬಂಧ ಬಂಧಿನಕ್ಕೀಡಾಗಿರುವ ಇತರ ಮೂವರಾದ ಅಜಯ್ ರಹಿರ್ಕಾರ್, ಜಗದೀಶ್ ಮಾತ್ರೆ ಮತ್ತು ರಾಕೇಶ್ ಧಾವಡೆ ಅವರುಗಳನ್ನು ನವೆಂಬರ್ 10ರ ತನಕ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

ಏತನ್ಮಧ್ಯೆ, ಭಯೋತ್ಪಾದನಾ ವಿರೋಧಿ ದಳವು ಮಾಲೆಗಾಂವ್ ಸ್ಫೋಟದ ಪ್ರಮುಖ ಆರೋಪಿಯ ವಿರುದ್ಧ ಬಲವಾದ ಪುರಾವೆಗಳಿವೆ ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕ್ವಟ್ರೋಚಿ ಬೋಫೋರ್ಸ್ ಹಣಪಡೆದಿಲ್ಲ: ಸಿಬಿಐ
ರಾಜಕೀಯ ಪ್ರವೇಶಿಸುವ ನಿರ್ಧಾರ ಕೈಗೊಂಡಿಲ್ಲ:ರಜನಿ
ದೆಹಲಿ: ಮಹಾರಾಷ್ಟ್ರ ಸದನದ ಮೇಲೆ ದಾಳಿ
ಪಾಸ್ವಾನ್‌ಗೆ ವಿಸ್ತರಿತ ಭದ್ರತೆಯ ಭರವಸೆ
ಹಕ್ಕು, ಜವಾಬ್ದಾರಿ ಜತೆಯಾಗಿರಬೇಕು: ಪಿಎಂ
ನಿಗದಿಯಂತೆ ಹೊಗೇನಕಲ್‌ ಯೋಜನೆ: ಸ್ಟಾಲಿನ್