ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗೋವಾ ಅತ್ಯಾಚಾರ ಪ್ರಕರಣ: ಸಚಿವ ಪುತ್ರ ಶರಣಾಗತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋವಾ ಅತ್ಯಾಚಾರ ಪ್ರಕರಣ: ಸಚಿವ ಪುತ್ರ ಶರಣಾಗತಿ
ಜರ್ಮನ್‌ನ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದ ಆರೋಪಿಯಾಗಿರುವ ಗೋವಾ ಶಿಕ್ಷಣ ಸಚಿವ ಅಟನಾಸಿಯೋ ಮಾನ್ಸೆರ್ರಟ್ಟೆ ಪುತ್ರ ರೋಹಿತ್ ಮಂಗಳವಾರ ಗೋವಾ ಪೊಲೀಸರ ಎದುರು ಶರಣಾಗಿದ್ದಾನೆ.

21ರ ಹರೆಯದ ರೋಹಿತ್ ತನ್ನ ತಂದೆಯೊಂದಿಗೆ ಕೆಂಪು ದೀಪದ ಕಾರಿನಲ್ಲಿ ಬಂದಿಳಿದು ಕಲಂಗುಟೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ತುಶಾರ್ ವರ್ಣೇಕರ್ ಅವರ ಎದುರು ಶರಣಾಗಿದ್ದಾನೆ.

ಅಪ್ರಾಪ್ತ ಜರ್ಮನ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ದೂರಿನಡಿ ಅಕ್ಟೋಬರ್ 14ರಂದು ರೋಹಿತ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ರೋಹಿತ್ ತಲೆತಪ್ಪಿಸಿಕೊಂಡಿದ್ದ.

ಈತ ನವೆಂಬರ್ ಒಂದರಂದು ಪೊಲೀಸರ ಮುಂದೆ ಹಾಜರಾಗಿದ್ದ. ಆದರೆ ಬಲಿಪಶು ಹುಡುಗಿ ಯಾವುದೇ ಹೇಳಿಕೆ ನೀಡದಿರುವ ಕಾರಣ ಆತನನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದರು.

ಆದರೆ ಇದಾದ ಕೆಲವೇ ಗಂಟೆಯ ಬಳಿಕ 14ರ ಹರೆಯದ ಬಾಲಕಿಯು ಮ್ಯಾಜಿಸ್ಟ್ರೇಟ್ ಒಬ್ಬರ ಎದರು ಹೇಳಿಕೆ ನೀಡಿದ್ದಳು. ಆದರೆ, ಈ ಹಿಂದೆ ಆಕೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಳು.

ಸೋಮವಾರ ರೋಹಿತ್ ವಿರುದ್ಧ ಹೊಸ ಸರ್ಚ್ ವಾರಂಟ್ ಹೊರಡಿಸಲಾಗಿತ್ತು. ಪೊಲೀಸ್ ತಂಡ ಒಂದು ಪಣಜಿ ಸಮೀಪದ ಆತನ ತಲೆಗಾಂವ್ ನಿವಾಸಕ್ಕೆ ದಾಳಿ ನೀಡಿದ್ದರೂ, ರೋಹಿತ್ ಅಲ್ಲಿ ಪತ್ತೆಯಾಗಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೋದಿ ವಿರುದ್ಧ ವಿಹಿಂಪ ಪ್ರತಿಭಟನೆ
ಮದುವೆ ಮುರಿದ ಮೊಡವೆಯ ಗೊಡವೆ !
ರಾಷ್ಟ್ರವಾದಿ ಶಿವಸೇನಾ ಕಚೇರಿಯಲ್ಲಿ ಬೆಂಕಿ
ಹಿರಿಯರಿಗೆ ಉದ್ದಂಡ ನಮಸ್ಕಾರ?
ಪ್ರಮುಖ ಆರೋಪಿಯೊಂದಿಗೆ ಪ್ರಗ್ಯಾ ಸಂಭಾಷಣೆ
ಕ್ವಟ್ರೋಚಿ ಬೋಫೋರ್ಸ್ ಹಣಪಡೆದಿಲ್ಲ: ಸಿಬಿಐ