ಜಮ್ಮು ವಲಯದ ಗಡಿಪ್ರದೇಶದಲ್ಲಿ ಸೋಮವಾರ ರಾತ್ರಿ ಉಗ್ರರ ತಂಡವೊಂದರ ಅಕ್ರಮ ನುಸುಳುವಿಕೆ ಸಂಚನ್ನು ವಿಫಲಗೊಳಿಸಿದ ವೇಳೆ ಗಡಿ ಭದ್ರತಾ ಪಡೆಯ(ಬಿಎಸ್ಎಫ್) ಇಬ್ಬರು ಜವಾನರು ಗಾಯಗೊಂಡಿದ್ದಾರೆ.
ಬಿಎಸ್ಎಫ್‌ನ ದುರ್ಗಾ ಪೋಸ್ಟ್ ಬಳಿ ಶಂಕಿತ ಚಲನವಲನಗಳು ಪತ್ತೆಯಾಗಿದ್ದು, ಕೂಡಲೆ ಕಾರ್ಯಪ್ರವೃತ್ತವಾದ ಭದ್ರತಾ ಪಡೆಯು ನುಸುಳುವಿಕೆ ತಡೆಯಲು ಗುಂಡು ಹಾರಾಟ ಆರಂಭಿಸಿತು ಎಂದು ಮೂಲಗಳು ಹೇಳಿವೆ.
ಭಯೋತ್ಪಾದಕರು ಪ್ರತಿಯಾಗಿ ಗುಂಡು ಹಾರಿಸಿದ್ದು, ಉಭಯ ತಂಡಗಳ ನುಡುವೆ ಸುಮಾರು ಎರಡೂವರೆ ಗಂಟೆಗಳ ಕಾಲ ಗುಂಡಿನ ಕಾದಾಟ ನಡೆದಿತ್ತು. ಈ ವೇಳೆ ಇಬ್ಬರು ಜವಾನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ.
ಅದಾಗ್ಯೂ, ಬಿಎಸ್ಎಫ್ ಪಡೆಯು ಉಗ್ರರ ಅಕ್ರಮ ನುಸುಳುವಿಕೆಗೆ ಅವಕಾಶ ನೀಡಲಿಲ್ಲ. ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಗಡಿ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಹೆಚ್ಚಿವೆ.
|