ಚಂದ್ರಗ್ರಹದತ್ತ ತೆರಳಿರುವ ಭಾರತದ ಮೊತ್ತ ಮೊದಲ ಮಾನವ ರಹಿತ ದೇಶೀಯ ಗಗನ ನೌಕೆ ಚಂದ್ರಯಾನ-1 ಚಂದ್ರಗ್ರಹದ ಪಥವನ್ನು ಪ್ರವೇಶಿಸಿದೆ. ಇಸ್ರೋ ವಿಜ್ಞಾನಿಗಳು ಮಂಗಳವಾರ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಐದನೆ ಹಾಗೂ ಕೊನೆಯ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು." ಚಂದ್ರಯಾನವು ಚಂದ್ರನ ಕಕ್ಷೆಯನ್ನು ತಲುಪಿದ್ದು, ಪೂರ್ವಯೋಜಿತ 3,80,000 ಕಿ.ಮೀ ದೂರದ ನಿಗದಿತ ಬಿಂದುವನ್ನು ಶವಿವಾರ ಸಂಜೆ ಸೇರಲಿದೆ" ಎಂದು ಇಸ್ರೋ ವಕ್ತಾರ ಎಸ್.ಸತೀಶ್ ಅವರು ಪಿಟಿಐಗೆ ತಿಳಿಸಿದ್ದಾರೆ.ಮಂಗಳವಾರ ಸಾಯಂಕಾಲ 4.56ರ ವೇಳೆಗೆ ವ್ಯೋಮನೌಕೆಯ ನ್ಯೂಟನ್ ಲಿಕ್ವಿಡ್ ಎಂಜಿನ್‌ಗೆ 145 ಸೆಕುಂಡುಗಳ ಕಾಲ ಇಂಧನ ಉಣಿಸಲಾಯಿತು.ಇಂದಿನ ಈ ಕಾರ್ಯಾಚರಣೆಯು ಚಂದ್ರಯಾನ-1ರ ಅತ್ಯಂತ ಪ್ರಮುಖ ಹಾಗೂ ಮೈಲಿಗಲ್ಲು ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಸತೀಶ್ ತಿಳಿಸಿದ್ದಾರೆ. |
|