ನವದೆಹಲಿ: ಮಹಾರಾಷ್ಟ್ರದಲ್ಲಿನ ಉತ್ತರ ಭಾರತೀಯರ ವಿರುದ್ಧದ ಹಿಂಸಾಚಾರವನ್ನು ಬಲವಾದ ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ತಡೆಯಬಹುದೇ ವಿನಹ ನ್ಯಾಯಾಲಯಗಳ ಆದೇಶದಿಂದ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೇಂದ್ರಸರಕಾರ ಹಾಗೂ ಬಿಹಾರ ಮತ್ತು ಮಹಾರಾಷ್ಟ್ರದ ರಾಜ್ಯಸರಕಾರಗಳು ಆಯಾ ರಾಜ್ಯಗಳಲ್ಲಿನ ನಿವಾಸಿಗಳು ಹಾಗೂ ಅವರ ಆಸ್ತಿಪಾಸ್ತಿಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ವೇಳೆಗೆ ಸರ್ವೋಚ್ಚ ನ್ಯಾಯಾಲಯವು ಮೇಲಿನ ಅಭಿಪ್ರಾಯ ಸೂಚಿಸಿದೆ. ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ನಮೂದಿಸಲಾಗಿತ್ತು.ಅರ್ಜಿದಾರರ ಪರ ವಕೀಲರಾಗಿರುವ ಸುಗ್ರೀವ್ ದುಬೆ ಅವರು ನ್ಯಾಯಮೂರ್ತಿಗಳಾದ ಬಿ.ಎನ್.ಅಗರ್ವಾಲ್ ಮತ್ತು ಜಿ.ಎಸ್.ಸಿಂಘ್ವಿ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಾದ ಮಂಡಿಸಿದ್ದು, ಉಭಯ ರಾಜ್ಯಗಳು ತಮ್ಮ ಅಮಾಯಕ ಪ್ರಜೆಗಳ ಜೀವರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಹೇಳಿದರು.ರಾಜ್ ಠಾಕ್ರೆ ನೇತೃ್ತ್ವದ ಎಂಎನ್ಎಸ್‌ನ ಉತ್ತರ ಭಾರತೀಯ ವಿರುದ್ಧದ ಚಳುವಳಿಯಿಂದ ಉಂಟಾಗಿರುವ ಗಲಭೆಯನ್ನು ಹತ್ತಿಕ್ಕಲು ಮಹಾರಾಷ್ಟ್ರ ಸರಕಾರ ಮಾತ್ರ ವಿಫಲವಾಗಿರುವುದಲ್ಲ, ಬಿಹಾರದ ನಿತೀಶ್ ಕುಮಾರ್ ಸರಕಾರವೂ ಬಸ್ಸು, ರೈಲು ಮುಂತಾದ ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಫಿರ್ಯಾದುದಾರ ಸಲೇಕ್‌ಚಂದ್ ಜೈನ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. |
|