ಮುಂಬೈ: ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ವು ಬುಧವಾರ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರನ್ನು ಬಂಧಿಸಿದೆ.
ಜವಳಿ ಪಟ್ಟಣದಲ್ಲಿ ನಡೆಸಲಾಗಿರುವ ಸ್ಫೋಟಕ್ಕೆ ಸಂಬಂಧಿಸಿದಂತೆ ಪುರೋಹಿತ್ ಅವರನ್ನು ಎರಡು ದಿನಗಳ ಹಿಂದೆ ತನಿಖೆಗೊಳಪಡಿಸಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಎಟಿಎಸ್) ಪರಂಬೀರ್ ಸಿಂಗ್ ಹೇಳಿದ್ದಾರೆ.
ಅದರೆ, ಸ್ಫೋಟದಲ್ಲಿ ಪುರೋಹಿತ್ ಅವರ ಪಾತ್ರವನ್ನು ಬಹಿರಂಗ ಪಡಿಸಲು ಸಿಂಗ್ ನಿರಾಕರಿಸಿದ್ದಾರೆ.
ಪುರೋಹಿತ್ ಅವರು ಮಧ್ಯಪ್ರದೇಶದ ಪಚ್ಮರ್ಹಿ ಎಂಬಲ್ಲಿರುವ ಆರ್ಮಿ ಎಜುಕೇಶನ್ ಕಾರ್ಪ್ಸ್ ಟ್ರೈನಿಂಗ್ ಕಾಲೇಜ್ ಆಂಡ್ ಸೆಂಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರನ್ನು ತನಿಖೆಗಾಗಿ ಎಟಿಎಸ್ ಕಳೆದ ವಾರ ವಶಕ್ಕೆ ತೆಗೆದುಕೊಂಡಿತ್ತು.
ಪುರೋಹಿತ್ ಅವರನ್ನು ನಾಸಿಕ್ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು. |