ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಂಧಮಲ್‌ನಲ್ಲಿ ವಿಹಿಂಪ ಕಾರ್ಯಕರ್ತನ ಕೊಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಂಧಮಲ್‌ನಲ್ಲಿ ವಿಹಿಂಪ ಕಾರ್ಯಕರ್ತನ ಕೊಲೆ
ಕೋಮುಗಲಭೆ ಪೀಡಿತ ಕಂಧಮಲ್‌ನಲ್ಲಿ ಒಳಗೊಳಗೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವಂತೆ ವಿಶ್ವಹಿಂದೂ ಕಾರ್ಯಕರ್ತನೊಬ್ಬನ ಕೊಲೆ ಮಾಡಲಾಗಿದೆ.

ಜಿಲ್ಲೆಯ ಬ್ರಹ್ಮನಿಗಾಂವ್‌ನ ಕುಂಭರಿಗಾಂವ್ ಎಂಬಲ್ಲಿ ವಿಹಿಂಪ ಕಾರ್ಯಕರ್ತ ಧನು ಪ್ರಧಾನಿ ಎಂಬಾತನನ್ನು ಮೂವರು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ.

ಪರಸ್ಪರ ಕಾದಾಟಕ್ಕಿಳಿದಿರುವ ಸಮುದಾಯಗಳನ್ನು ನಿಯಂತ್ರಿಸುವ ಮತ್ತು ತಣ್ಣಗಾಗಿಸುವ ಕಾಯಕಕ್ಕೆ ಒರಿಸ್ಸಾ ಆಡಳಿತವು ಇಳಿದಿರುವಾಗಲೆ ಈ ದುರ್ಘಟನೆ ಸಂಭವಿಸಿದ್ದು, ಇನ್ನಷ್ಟು ಗಲಭೆ ಹೆಚ್ಚುವ ಭೀತಿ ಉಂಟಾಗಿದೆ.

ಮೃತ ಪ್ರಧಾನಿ, ಆಡಳಿತಾರೂಢ ಬಿಜೆಪಿಯೊಂದಿಗೆ ಕಾರ್ಯವೆಸಗುತ್ತಿದ್ದರು ಮತ್ತು ಅವರ ಸಹೋದರನೊಬ್ಬ ಪಂಚಾಯತ್ ಸಮಿತಿ ಸದಸ್ಯರಾಗಿಗ್ದಾರೆ.

ಕುಂಭರಿಗಾಂವ್‌ನ ಶಾಲೆಯೊಂದರರಲ್ಲಿ ಧನು ಪ್ರಧಾನಿ ಇದ್ದಾಗ ಮಧ್ಯರಾತ್ರಿ 12.30ರ ವೇಳೆಗೆ ಅವರ ಮೇಲೆ ಮೂವರು ಅಪರಿಚಿತ ದುಷ್ಕರ್ಮಿಗಳು ಗುಂಡೆಸೆದರು ಎಂದು ಪೊಲೀಸರು ತಿಳಿಸಿದ್ದಾರೆ.

32ರ ಹರೆಯದ ಪ್ರಧಾನಿಯ ಎದೆ ಹಾಗೂ ತಲೆಗೆ ಗುಂಡೇಟು ತಗುಲಿದ್ದು ಅವರು ಸಾವಿಗೀಡಾಗಿದ್ದಾರೆ. ಕೊಲೆಗೆ ಯಾವುದೇ ಕಾರಣವನ್ನು ಆಡಳಿತವು ನೀಡಲಿಲ್ಲ. ಆದರೆ ಕೇಸರಿ ಬಳಗವು ಇದು ಕಟಿಂಗಿಯ ಪ್ರದೇಶದ ಕ್ರಿಶ್ಚಿಯನ್ನರ ಕೃತ್ಯ ಎಂದು ಆರೋಪಿಸಿದೆ.

ಸ್ಥಳಕ್ಕೆ ಧಾವಿಸಿರುವ ಕಂಧಮಲ್ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಕುಮಾರ್ ಅವರೂ ಪ್ರಧಾನಿ ಕೊಲೆಗೆ ಕಾರಣವೇನೆಂದು ತಕ್ಷಣಕ್ಕೆ ಪ್ರಕಟಿಸಲಿಲ್ಲ. ಎಲ್ಲ ಕೋನಗಳು ಮತ್ತು ಸಾಧ್ಯತೆಗಳ ಕುರಿತು ತಪಾಸಿಸುತ್ತಿರುವುದಾಗಿ ಅವರು ಹೇಳಿದ್ದು, ಕೊಲೆಗಾರರಿಗೆ ಏನು ಪ್ರೇರಣೆ ಎಂಬುದು ಇನ್ನಷ್ಟೆ ಪತ್ತೆಯಾಗಬೇಕಿದೆ ಎಂದು ತಿಳಿಸಿದ್ದಾರೆ.

ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಸ್ಥಳೀಯನೊಬ್ಬನನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಲಾಗುತ್ತದೆ ಎಂದು ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಪಾಳಮೋಕ್ಷಿತ ಕಾರ್ಯಕರ್ತನ ರಾಜೀನಾಮೆ
ಹಣೆಗೇಕೆ ವಿಭೂತಿ, ತಿಲಕ?: ಹಿಂದೂಗಳಿಗೆ ಕರುಣಾ ಪ್ರಶ್ನೆ
ಕೋಸಿ ವೀಕ್ಷಣೆಗೆ ಭಾರತೀಯ ತಾಂತ್ರಿಕ ತಂಡದ ಭೇಟಿ
ಗೋವಾ ಸಚಿವ ಪುತ್ರ ಪೊಲೀಸ್ ವಶಕ್ಕೆ
ಪಕ್ಷದ ಕಾರ್ಯಕರ್ತನ ಕೆನ್ನೆಗೆರಡು ಬಿಗಿದ ಉಮಾ
ಒಂದೇ ದಿನ 20 ಪ್ರನಾಳ ಶಿಶುಗಳ ಜನನ