ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿಯಲ್ಲಿ ಸಂಭ್ರಮದ 'ಒಬಾಮ' ಆಚರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿಯಲ್ಲಿ ಸಂಭ್ರಮದ 'ಒಬಾಮ' ಆಚರಣೆ
'ಒಬಾ ಮ, ಒಬಾ ಮ' ಎಂಬ ಘೋಷಣೆ ವಿಶ್ವಾದ್ಯಂತ ಪ್ರತಿಧ್ವಿಸಿರುವಂತೆ, ದೆಹಲಿ ಒಬಾಮ ಅಭಿಮಾನಿಗಳೂ ತಾವೇನೂ ಹಿಂದೆ ಬಿದ್ದಿಲ್ಲ ಎಂಬಂತೆ, ಸಂಭ್ರಮಾಚರಣೆ ನಡೆಸಿದರು.

ಮೊದಲ ಆಫ್ರಿಕ-ಅಮೆರಿಕಿಗನ ಐತಿಹಾಸಿಕ ಪ್ರಚಂಡ ವಿಜಯವನ್ನು ವಿಶ್ವಾದ್ಯಾಂತ ಆಚರಿಸಲಾಗುತ್ತಿದೆ. ಕರಿಯರ ನಾಡು ಕೀನ್ಯಾ ಈ ಸಂತಸದ ಕ್ಷಣಕ್ಕಾಗಿ ರಾಷ್ಟ್ರೀಯ ರಜೆ ಘೋಷಿಸಿದೆ.

ND
ದೆಹಲಿಯ ಅಮೆರಿಕ ಕೇಂದ್ರದ ಬಳಿ ಜಮಾಯಿಸಿರುವ ಒಬಾಮ ಬೆಂಬಲಿಗರು, ಪರಸ್ಪರ ಆಲಿಂಗಿಸಿಕೊಂಡು ಕುಣಿದು ಕುಪ್ಪಳಿಸಿದರು.

ಕರಿಯ ಜನಾಂಗದ ವ್ಯಕ್ತಿ ಪ್ರಥಮ ಬಾರಿಗೆ ಶ್ವೇತಭವನದಲ್ಲಿ ಅಮೆರಿಕದ ಪರಮೋಚ್ಚ ಪದವಿಗೇರುತ್ತಿರುವುದು ಜನಾಂಗೀಯ ಸಮಾನತೆಯನ್ನು ಸಾಧಿಸಿದ್ದು, ಇದು ಅಮೆರಿಕದಲ್ಲಿ 'ಕಡಿಮೆ ವೈರುಧ್ಯಗಳ' ಹೊಸ ಯುಗವನ್ನು ಅರಳಿಸುತ್ತದೆ ಎಂದು ಒಬಾಮ ಅವರ ಹಲವಾರು ಅಭಿಮಾನಿಗಳು ಅಭಿಪ್ರಾಯಿಸಿದ್ದಾರೆ.

ಒಬಾಮ ಅವರೊಂದಿಗೆ 1988 ರಿಂದ 1990ರ ತನಕ ಎರಡು ವರ್ಷಗಳ ಕಾಲ ಹಾರ್ವರ್ಡ್ ವಿಶ್ವವಿದ್ಯಾವಿಲಯದಲ್ಲಿ ವಿದ್ಯಾಭ್ಯಾಸ ಮಾಡಿರುವ ಸೂರತ್ ಸಿಂಗ್ ಅವರು, ಈ 'ಬುದ್ಧಿವಂತ' ಅಧ್ಯಕ್ಷೀಯ ಸ್ಫರ್ಧೆಯಲ್ಲಿ ಸಫಲವಾಗಿರುವ ಕುರಿತು ನೂರು ಪ್ರತಿಶತ ವಿಶ್ವಾಸ ಹೊಂದಿದ್ದೆನೆಂದು ಹೇಳಿದ್ದಾರೆ.

"ಇವರು ಇತರ ವಿದ್ಯಾರ್ಥಿಗಳಂತಲ್ಲ, ವಿಶ್ವದ ರಾಜಕೀಯವನ್ನು ಚರ್ಚಿಸುವಲ್ಲಿ ಹೆಚ್ಚು ಆಸಕ್ತರಾಗಿದ್ದರು. ಅವರು ಏಶ್ಯಾ ಹಾಗೂ ವಿಶ್ವದ ಇತರ ಭಾಗದ ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತಿದ್ದರು, ಆದರೆ ಅಮೆರಿಕದ ಇತರ ವಿದ್ಯಾರ್ಥಿಗಳು ಹಾಗಿರಲಿಲ್ಲ" ಎಂದು 48ರ ಹರೆಯದ ಸಿಂಗ್ ಹೇಳಿದ್ದಾರೆ.

ಒಬಾಮ ಗೆಲುವು ಜಾಗತಿಕ ರಾಜಕೀಯದಲ್ಲಿ ಒಂದು ಮಹತ್ವದ ತಿರುವಾಗಿದೆ. ಅವರು ಗೆಲುವು ಅಮೆರಿಕ ಸಮಾಜದಲ್ಲಿರುವ ಜನಾಂಗೀಯ ಬೇಧವನ್ನು ತೊಡೆದು ಹಾಕಲಿದೆ ಎಂದು ದೆಹಲಿ ವಿಶ್ವವಿದ್ಯಾನಿಯದ ವಿದ್ಯಾರ್ಥಿ ಸೌರವ್ ದಾಸ್ ಹೇಳಿದ್ದಾರೆ.

ಅಮೆರಿಕ ಕೇಂದ್ರವನ್ನು ವಿಶೇಷವಾಗಿ ಶೃಂಗರಿಸಲಾಗಿತ್ತು. ಶಾಲಾಮಕ್ಕಳು ಸೇರಿದಂತೆ ಸುಮಾರು 300 ಮಂದಿಯನ್ನು ಚುನಾವಣಾ ಫಲಿತಾಂಶಗಳ ವೀಕ್ಷಣೆಗಾಗಿ ಆಹ್ವಾಸಿಸಲಾಗಿತ್ತು. ವಿವಿಧ ವಾಹಿನಿಗಳ ಸುದ್ದಿಯನ್ನು ಬೃಹತ್ ಪರದೆಯ ಮೇಲೆ ಬಿತ್ತರಿಸಲಾಗಿತ್ತು. ಪ್ರತಿಯೊಂದು ರಾಜ್ಯದಲ್ಲೂ ಒಬಾಮ ಗೆಲವನ್ನು ಘೋಷಿಸುತ್ತಿರುವಂತೆ ಇಲ್ಲಿ ನೆರೆದಿದ್ದವರ ಹರ್ಷ ಮುಗಿಲುಮುಟ್ಟುತ್ತಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಂಧಮಲ್‌ನಲ್ಲಿ ವಿಹಿಂಪ ಕಾರ್ಯಕರ್ತನ ಕೊಲೆ
ಕಪಾಳಮೋಕ್ಷಿತ ಕಾರ್ಯಕರ್ತನ ರಾಜೀನಾಮೆ
ಹಣೆಗೇಕೆ ವಿಭೂತಿ, ತಿಲಕ?: ಹಿಂದೂಗಳಿಗೆ ಕರುಣಾ ಪ್ರಶ್ನೆ
ಕೋಸಿ ವೀಕ್ಷಣೆಗೆ ಭಾರತೀಯ ತಾಂತ್ರಿಕ ತಂಡದ ಭೇಟಿ
ಗೋವಾ ಸಚಿವ ಪುತ್ರ ಪೊಲೀಸ್ ವಶಕ್ಕೆ
ಪಕ್ಷದ ಕಾರ್ಯಕರ್ತನ ಕೆನ್ನೆಗೆರಡು ಬಿಗಿದ ಉಮಾ