ಬಿಜೆಪಿ ವರಿಷ್ಠ, ಪ್ರಧಾನ ಮಂತ್ರಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿಯವರು ದಮ್ಮಿದ್ದರೆ ತನ್ನೆದುರು ಮಧ್ಯಪ್ರದೇಶದ ಯಾವುದೇ ಕ್ಷೇತ್ರದಿಂದ ಸ್ಫರ್ಧಿಸಲಿ ಎಂದು ಭಾರತೀಯ ಜನಶಕ್ತಿ ಪಕ್ಷದ ವರಿಷ್ಠೆ ಉಮಾಭಾರತಿ ಸವಾಲು ಹಾಕಿದ್ದಾರೆ.ಬಿಜೆಪಿಯು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೆದುರು ಸ್ಫರ್ಧಿಸುವಂತೆ ಸವಾಲು ಹಾಕಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಉಮಾ ಮೇಲಿನಂತೆ ಉತ್ತರಿಸಿದ್ದಾರೆ." ಈ ನಿಲುವಿನಲ್ಲಿ ನಾನು ಬಿಜೆಪಿ ಮುಖ್ಯಸ್ಥ ರಾಜ್‌ನಾಥ್ ಸಿಂಗ್ ಅವರನ್ನೂ ಪರಿಗಣಿಸುವುದಿಲ್ಲ" ಎಂದೂ ಭಾರತೀಯ ಜನಶಕ್ತಿ ಪಕ್ಷದ ರಾಷ್ಟ್ರಾಧ್ಯಕ್ಷೆ ಉಮಾಭಾರತಿ ಹೇಳಿದ್ದಾರೆ.ಸಮಯದ ಅಭಾವದ ಕಾರಣ ತಾನು ಮೊದಲ ಹಂತದ ನವೆಂಬರ್ 27ರಂದು ನಡೆಯಲಿರುವ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ತನಗೆ ಧಾರ್ ಕ್ಷೇತ್ರದಿಂದ ಸ್ಫರ್ಧಿಸಲು ಇಷ್ಟವಿತ್ತಾದರೂ ಸಮಯದ ಅಭಾವದ ಕಾರಣ ಚುನಾವಣೆಗಳಲ್ಲಿ ಸ್ಫರ್ಧಿಸಲು ಆಗುತ್ತಿಲ್ಲ ಎಂದು ನುಡಿದರು.ಚುನಾವಣಾ ಮೈತ್ರಿಯ ಬಗ್ಗೆ ಮಾತನಾಡಿದ ಉಮಾ ತನ್ನ ಪಕ್ಷವು ಗೊಂಡವನ ಗಂಟಾಂತ್ರ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಮಿಕ್ಕ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಇಲ್ಲ ಎಂದು ನುಡಿದರು. |
|