ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದುಬಾರಿಯಾದ ಉಮಾ ತಪರಾಕಿ: 350 ಕಾರ್ಯಕರ್ತರ ರಾಜೀನಾಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುಬಾರಿಯಾದ ಉಮಾ ತಪರಾಕಿ: 350 ಕಾರ್ಯಕರ್ತರ ರಾಜೀನಾಮೆ
ಸಿಟ್ಟಿಗೆದ್ದ ಉಮಾಭಾರತಿ ತನ್ನ ಪಕ್ಷದ ಕಾರ್ಯಕರ್ತನೊಬ್ಬನಿಗೆ ಸಾರ್ವಜನಿಕವಾಗಿ ಥಳಿಸಿರುವುದು ಅವರಿಗೆ ತುಂಬಾ ದುಬಾರಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಪಕ್ಷದ 350 ಮಂದಿ ಸಾಮೂಹಿಕ ರಾಜೀನಾಮೆ ಸಲ್ಲಸಿದ್ದಾರೆ.

PTI
ಭಾರತೀಯ ಜನಶಕ್ತಿ ಪಕ್ಷದ ಸಂಸ್ಥಾಪಕಿ, ರಾಷ್ಟ್ರಾಧ್ಯಕ್ಷೆ ಉಮಾಭಾರತಿ ಅವರು ಬುಧವಾರ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ, ಪಕ್ಷದ ಚಿಂದ್ವಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ರಾಯ್ ಎಂಬವರಿಗೆ ಸಾರ್ವಜನಿಕವಾಗಿ ಥಳಿಸಿದ್ದರು. ತಾನು ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿರಬೇಕಿದ್ದರೆ, ಸಭೆಯಿಂದ ಹೊರಬನ್ನಿರೆಂದು ರಾಯ್ ಪದೇಪದೇ ಮೊಬೈಲ್ ಕರೆ ನೀಡಿರುವುದು ಉಮಾಭಾರತಿ ಕೋಪಗೊಳ್ಳುವಂತೆ ಮಾಡಿತ್ತು. ಹೊರಬಂದ ಉಮಾ ಕಾರಲ್ಲಿ ಕುಳಿತಿದ್ದ ಅನಿಲ್ ಅವರನ್ನು ಕೆಳಗಿಳಿಯುವಂತೆ ಹೇಳಿ ಎರಡೂ ಕೆನ್ನೆಗೆ ಬಾರಿಸಿದ್ದರು.

ಅದಾದ ಬಳಿಕ ಪತ್ರಿಕಾಗೋಷ್ಠಿ ಕರೆದು ಅನಿಲ್ ತನ್ನ ತಮ್ಮನನಂತೆ ಆತನನ್ನು ದಂಡಿಸುವ ಮತ್ತು ಮುದ್ದಿಸುವ ಹಕ್ಕು ತನಗಿದೆ ಎಂದು ಹೇಳಿದ್ದರು. ಪ್ರತಿಯಾಗಿ ಅನಿಲ್ ಅವರೂ, ಉಮಾ ತನ್ನ ಹಿರಿಯಕ್ಕನಂತೆ ಎಂದು ಹೇಳಿದ್ದರೂ, ಬುಧವಾರ ಸಂಜೆ ರಾಜೀನಾಮೆ ನೀಡಿದ್ದರು. ಇದಲ್ಲದೆ ಉಮಾರ ಲಿಖಿತವಾಗಿಯೂ ಕ್ಷಮೆಯಾಚಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚಿಂದ್ವಾರ ಜಿಲ್ಲಾಧ್ಯಕ್ಷ ನೇಮಿ ಚಂದ್ ವರ್ಮಾ ಅವರು ಇತರ 350 ಕಾರ್ಯಕರ್ತರೊಂದಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಸಂಜಯ್ ಕೊನಾರ್, ಕಿಶೋರ್ ಮುಂಜಾರೆ ಮತ್ತು ಓಂ ಕುಮಾರಿ ಅವರುಗಳು ಸೇರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಕತ್ತಿದ್ದರೆ ನನ್ನೆದುರು ಸ್ಫರ್ಧಿಸಲಿ: ಆಡ್ವಾಣಿಗೆ ಉಮಾ ಸವಾಲು
ರಾಹುಲ್‌ಗೆ ಸನಿಹದಿಂದ ಗುಂಡಿಕ್ಕಲಾಗಿದೆ: ವರದಿ
ದೆಹಲಿಯಲ್ಲಿ ಸಂಭ್ರಮದ 'ಒಬಾಮ' ಆಚರಣೆ
ಕಂಧಮಲ್‌ನಲ್ಲಿ ವಿಹಿಂಪ ಕಾರ್ಯಕರ್ತನ ಕೊಲೆ
ಕಪಾಳಮೋಕ್ಷಿತ ಕಾರ್ಯಕರ್ತನ ರಾಜೀನಾಮೆ
ಹಣೆಗೇಕೆ ವಿಭೂತಿ, ತಿಲಕ?: ಹಿಂದೂಗಳಿಗೆ ಕರುಣಾ ಪ್ರಶ್ನೆ