ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲೋಕಸಭೆಗೆ ರಾಜೀನಾಮೆ ನೀಡಲಿರುವ ಜೆಡಿ(ಯು)
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆಗೆ ರಾಜೀನಾಮೆ ನೀಡಲಿರುವ ಜೆಡಿ(ಯು)
ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರನ್ನು ಹಿಂದಿಕ್ಕಲು ಮುಂದಾಗಿರುವ ನಿತೀಶ್ ಕುಮಾರ್ ನೇತೃತ್ವದ ಜನತಾದಳ(ಸಂಯುಕ್ತ)ವು, ತನ್ನ ಎಲ್ಲಾ ಐದು ಲೋಕಸಭಾ ಸದಸ್ಯರು ರಾಜೀನಾಮೆ ನೀಡುವುದಾಗಿ ಘೋಷಿಸಿದೆ.

ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರ ವಿರುದ್ಧ ನಡೆಯುತ್ತಿರುವ ಚಳುವಳಿಯನ್ನು ಪ್ರತಿಭಟಿಸಿ ಪಕ್ಷವು ಈ ಕ್ರಮಕ್ಕೆ ಮುಂದಾಗಿದೆ.

ಪಕ್ಷದ ಸಂಸದರು ಶುಕ್ರವಾರ ಮುಂಜಾನೆ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಸಂಸದೀಯ ಪಕ್ಷದ ನಾಯಕ ಹಾಗೂ ಸಂಸದ ಪ್ರಭುನಾಥ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉತ್ತರ ಭಾರತೀಯರ ವಿರುದ್ಧ ದಾಳಿ ನಡೆಸಿರನ್ನು ಮಹಾರಾಷ್ಟ್ರ ಸರಕಾರ 'ಪ್ರೋತ್ಸಾಹಿಸುತ್ತಿದೆ' ಮತ್ತು ಕೇಂದ್ರ ಸರಕಾರ ಈ ಕುರಿತು ಮೌನ ವಹಿಸಿರುವ ಕಾರಣ ತಮ್ಮ ಪಕ್ಷದ ಮುಂದೆ ಬೇರೆ ಯಾವುದೇ ಆಯ್ಕೆಗಳಿರಲಿಲ್ಲ ಎಂದು ಪಕ್ಷವು ಹೇಳಿಕೊಂಡಿದೆ.

ಬಿಹಾರ ಸಂಸದರ ನಿಯೋಗವು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಅಪರಾಧಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಪ್ರಭುನಾಥ್ ಸಿಂಗ್ ಹೇಳಿದ್ದಾರೆ.

ಆದರೆ ಮೇಲ್ಮನೆ ಸದಸ್ಯರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸ್ವತಹ ರಾಜ್ಯಸಭಾ ಸದಸ್ಯರೂ ಆಗಿರುವ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದುಬಾರಿಯಾದ ಉಮಾ ತಪರಾಕಿ: 350 ಕಾರ್ಯಕರ್ತರ ರಾಜೀನಾಮೆ
ತಾಕತ್ತಿದ್ದರೆ ನನ್ನೆದುರು ಸ್ಫರ್ಧಿಸಲಿ: ಆಡ್ವಾಣಿಗೆ ಉಮಾ ಸವಾಲು
ರಾಹುಲ್‌ಗೆ ಸನಿಹದಿಂದ ಗುಂಡಿಕ್ಕಲಾಗಿದೆ: ವರದಿ
ದೆಹಲಿಯಲ್ಲಿ ಸಂಭ್ರಮದ 'ಒಬಾಮ' ಆಚರಣೆ
ಕಂಧಮಲ್‌ನಲ್ಲಿ ವಿಹಿಂಪ ಕಾರ್ಯಕರ್ತನ ಕೊಲೆ
ಕಪಾಳಮೋಕ್ಷಿತ ಕಾರ್ಯಕರ್ತನ ರಾಜೀನಾಮೆ