ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅರುಷಿ: ಮರಣೋತ್ತರ ದಾಖಲೆಗಾಗಿ ಸಿಬಿಐ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಷಿ: ಮರಣೋತ್ತರ ದಾಖಲೆಗಾಗಿ ಸಿಬಿಐ ದಾಳಿ
PTI
ರಾಷ್ಟ್ರವನ್ನೇ ತಲ್ಲಣಗೊಳಿಸಿದ್ದ, ನೋಯ್ಡಾದ ಅರುಷಿ ಹಾಗೂ ಆಕೆಯ ಮನೆಗೆಲಸದಾಳು ಹೇಮರಾಜ್ ಕೊಲೆ ಪ್ರಕರಣ ನಡೆದು ಸುಮಾರು ಆರು ತಿಂಗಳ ಬಳಿಕ ಸಿಬಿಐ, ನೋಯ್ಡಾ ಜಿಲ್ಲಾ ಆಸ್ಪತ್ರೆಯಲ್ಲಿ ಹುಡುಕಾಟ ನಡೆಸಿದೆ. ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ಕೆಲವು ವರದಿಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿರುವುದಾಗಿ ಸಿಬಿಐ ಗುರುವಾರ ಹೇಳಿದೆ.

ಅರುಷಿಯ ಮರಣೋತ್ತರ ಪರೀಕ್ಷೆಯ ಕೆಲವು ದಾಖಲೆಗಳು ಕಳೆದುಹೋಗಿರುವ ಕಾರಣ, ಅಕೆಯ ಮರಣೋತ್ತರ ಪರೀಕ್ಷೆ ನಡೆದಿರುವ ಜಿಲ್ಲಾ ಆಸ್ಪತ್ರೆಯ ಮೇಲೆ ಬುಧವಾರ ದಾಳಿ ನಡೆಸಿರುವುದಾಗಿ ಸಿಬಿಐ ತಿಲಿಸಿದೆ.

ದಾಳಿಯ ವೇಳೆಗೆ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಸಿಬಿಐ ತನಿಖಾ ಏಜೆನ್ಸಿಯ ಮುಖ್ಯಸ್ಥರು ಹೇಳಿದರಾದರೂ, ಯಾವ ದಾಖಲೆ ಎಂಬುದನ್ನು ತಿಳಿಸಲು ಅವರು ನಿರಾಕರಿಸಿದರು.

ಶವಪರೀಕ್ಷೆಯ ವರದಿಯನ್ನು ತಿರುಚಿರುವ ಸಾಧ್ಯತೆಗಳಿದ್ದು, ಆಸ್ಪತ್ರೆಯ ವೈದ್ಯರು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

ಅರುಷಿ ಮತ್ತು ಹೇಮರಾಜ್ ಕೊಲೆಗೆ ಬಳಸಲಾಗಿರುವ ಆಯುಧಗಳನ್ನು ಸಿಬಿಐ ಇನ್ನಷ್ಟೆ ಪತ್ತೆ ಹಚ್ಚಬೇಕಿದೆ. ಕೊಲೆಯ ಕುರಿತು ಮಹತ್ತರ ಸುಳಿವು ಪಡೆಯುವಲ್ಲಿ ವಿಫಲಾಗಿರುವ ಸಿಬಿಐ, ಈ ಕುರಿತು ಮಹತ್ವದ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯ ಬಹುಮಾನ ಘೋಷಿಸಿದೆ.

ದಂತ ವೈದ್ಯ ರಾಜೇಶ್ ತಲ್ವಾರ್ ಪುತ್ರಿಯಾಗಿರುವ 14ರ ಹರೆಯದ ಅರುಷಿ ಮೇ 16ರಂದು ತನ್ನ ಜಲ್ವಾಯು ವಿಹಾರ್ ಅಪಾರ್ಟ್‌ಮೆಂಟಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮನೆಗೆಲಸದಾಳು ಹೇಮರಾಜ್ ಈ ಕುಕೃತ್ಯ ನಡೆಸಿರಬಹುದು ಎಂಬುದಾಗಿ ಪೊಲೀಸರು ಮೊದಲಿಗೆ ಶಂಕಿಸಿದ್ದರು. ಆದರೆ ಮರುದಿನ ಮನೆಯ ತಾರಸಿಯಲ್ಲಿ ಹೇಮರಾಜ್‌ನ ಶವ ಪತ್ತೆಯಾಗಿತ್ತು.

ಪೊಲೀಸರ ತನಿಖೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಪೋಟದ ರೂವಾರಿ ತಾನೆಂದು ಒಪ್ಪಿಕೊಂಡ ಕರ್ನಲ್
ಕರ್ನಲ್ ಬಂಧನದಿಂದ ಸೇನಾ ಪ್ರತಿಷ್ಠೆಗೆ ಮಸಿ
ಲೋಕಸಭೆಗೆ ರಾಜೀನಾಮೆ ನೀಡಲಿರುವ ಜೆಡಿ(ಯು)
ದುಬಾರಿಯಾದ ಉಮಾ ತಪರಾಕಿ: 350 ಕಾರ್ಯಕರ್ತರ ರಾಜೀನಾಮೆ
ತಾಕತ್ತಿದ್ದರೆ ನನ್ನೆದುರು ಸ್ಫರ್ಧಿಸಲಿ: ಆಡ್ವಾಣಿಗೆ ಉಮಾ ಸವಾಲು
ರಾಹುಲ್‌ಗೆ ಸನಿಹದಿಂದ ಗುಂಡಿಕ್ಕಲಾಗಿದೆ: ವರದಿ