ಮುಂಬೈಯಲ್ಲಿ ರಾಹುಲ್ ರಾಜ್ ಎಂಬ ಬಿಹಾರಿ ಯುವಕನನ್ನು ಪೊಲೀಸರು ಗುಂಡಿಟ್ಟು ಕೊಂದಿರುವ ಘಟನೆಯನ್ನು ಪ್ರತಿಭಟಿಸಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ(ಸಂಯುಕ್ತ)ದ, ಎಲ್ಲಾ ಐದು ಲೋಕಸಭಾ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಸಂಸದರು ಶುಕ್ರವಾರ ಮುಂಜಾನೆ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಉತ್ತರ ಭಾರತೀಯರ ವಿರುದ್ಧ ದಾಳಿ ನಡೆಸಿರನ್ನು ಮಹಾರಾಷ್ಟ್ರ ಸರಕಾರ 'ಪ್ರೋತ್ಸಾಹಿಸುತ್ತಿದೆ' ಮತ್ತು ಕೇಂದ್ರ ಸರಕಾರ ಈ ಕುರಿತು ಮೌನ ವಹಿಸಿರುವ ಕಾರಣ ತಮ್ಮ ಪಕ್ಷದ ಮುಂದೆ ಬೇರೆ ಯಾವುದೇ ಆಯ್ಕೆಗಳಿರಲಿಲ್ಲ ಎಂದು ಪಕ್ಷವು ಹೇಳಿಕೊಂಡಿದೆ.
ಬಿಹಾರ ಸಂಸದರ ನಿಯೋಗವು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಅಪರಾಧಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಪ್ರಭುನಾಥ್ ಸಿಂಗ್ ಗರುವಾರ ತಿಳಿಸಿದ್ದರು. |