ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತನಿಖೆಗೆ ಸೇನೆ ಸಹಕರಿಸಲಿದೆ: ಆಂಟನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತನಿಖೆಗೆ ಸೇನೆ ಸಹಕರಿಸಲಿದೆ: ಆಂಟನಿ
PIB
ಮಾಲೆಗಾಂವ್ ಸ್ಫೋಟದಲ್ಲಿ ಸೇವಾನಿರತ ಸೈನ್ಯಾಧಿಕಾರಿಯೊಬ್ಬಾತ ಭಾಗಿಯಾಗಿರುವ ಸುದ್ದಿಯ ಕುರಿತು ಕಳವಳ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ಎ.ಕೆ.ಆಂಟನಿ, ಮಹಾರಾಷ್ಟ್ರ ಪೊಲೀಸರ ತನಿಖಾವರದಿಯ ಆಧಾರದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಭಾಗಿಯಾಗಿದ್ದಾರೆಂದು ಹೇಳಲಾಗಿರುವ, ಸೆಪ್ಟೆಂಬರ್ 29ರ ಮಾಲೆಗಾಂವ್ ಸ್ಫೋಟದ ಬೇರನ್ನು ಸರಕಾರ ಬಗೆಯಲಿದೆ ಎಂದು ಅವರು ಶುಕ್ರವಾರ ಹೇಳಿದ್ದಾರೆ.

"ಇದು ನಮ್ಮೆಲ್ಲರಿಗೂ ಗಂಭೀರ ಕಳವಳದ ವಿಚಾರವಾಗಿದೆ. ಪ್ರಕರಣ ಕುರಿತು ನಾವು ಮಹಾರಾಷ್ಟ್ರ ಪೊಲೀಸರ ವರದಿಯನ್ನು ಕಾಯುತ್ತಿದ್ದೇವೆ. ವರದಿಯಾಧಾರಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದವರು ಲೆಫ್ಟಿನೆಂಟ್ ಕರ್ನಲ್ ಸ್ಫೋಟದಲ್ಲಿ ಭಾಗಿಯಾಗಿರುವ ಕುರಿತು ತಪ್ಪೊಪ್ಪಿಕೊಂಡಿರುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು.

ಇನ್ನೂ ಕೆಲವು ಅಧಿಕಾರಿಗಳು ಪ್ರಕರಣದಲ್ಲಿ ಕೈಜೋಡಿಸಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅವರು, ಸೇನೆಯು ಯಾವುದೇ ಹಿಂಜರಿಕೆ ಇಲ್ಲದೆ ತನಿಖೆಗೆ ಸಹಕರಿಸುತ್ತಿದೆ ಎಂದು ಪರೋಕ್ಷವಾಗಿ ನುಡಿದರು.

ತನಿಖಾ ತಂಡಗಳೊಂದಿಗೆ ಸೇನೆಯು ಸಂಪೂರ್ಣ ಸಹಕಾರ ನೀಡುತ್ತಿದೆ. ನಾವು ಮಹಾರಾಷ್ಟ್ರ ಪೊಲೀಸರ ವರದಿಗೆ ಕಾಯುತ್ತಿದ್ದೇವೆ. ಮತ್ತು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆಗೆ ಜೆಡಿ(ಯು) ಸದಸ್ಯರ ರಾಜೀನಾಮೆ
ಆಳ್ವ ವಿರುದ್ಧ ಶಿಸ್ತು ಕ್ರಮಕ್ಕೆ ಹೈಕಮಾಂಡ್ ಆದೇಶ
ಕರ್ನಾಟಕದಲ್ಲಿ ಕಾಂಗ್ರೆಸ್ ಟಿಕೆಟ್ ಮಾರಾಟವಾಗಿತ್ತು: ಆಳ್ವ
ಅರುಷಿ: ಮರಣೋತ್ತರ ದಾಖಲೆಗಾಗಿ ಸಿಬಿಐ ದಾಳಿ
ಸ್ಪೋಟದ ರೂವಾರಿ ತಾನೆಂದು ಒಪ್ಪಿಕೊಂಡ ಕರ್ನಲ್
ಕರ್ನಲ್ ಬಂಧನದಿಂದ ಸೇನಾ ಪ್ರತಿಷ್ಠೆಗೆ ಮಸಿ