ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ವಿಚ್ಛೇದನಕ್ಕೆ ಪ್ರಬಲ ಕಾರಣ: ಸುಪ್ರೀಂ ಕೋರ್ಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ವಿಚ್ಛೇದನಕ್ಕೆ ಪ್ರಬಲ ಕಾರಣ: ಸುಪ್ರೀಂ ಕೋರ್ಟ್
ಪತಿಯ ಒಪ್ಪಿಗೆ ಇಲ್ಲದೆ ಪತ್ನಿಯು ಗರ್ಭಪಾತ ಮಾಡಿಸಿಕೊಂಡಿದ್ದರೆ, ಅದು ಮಾನಸಿಕ ಕ್ರೌರ್ಯವಾಗುತ್ತದೆ ಮತ್ತು ಇದೇ ಆಧಾರದಲ್ಲಿ ಪತಿಯು ವಿವಾಹ ವಿಚ್ಛೇದನ ಪಡೆಯಲು ಅರ್ಹವಾಗುತ್ತಾನೆ ಎಂಬ ಮಹತ್ವದ ತೀರ್ಪೊಂದನ್ನು ಸುಪ್ರೀಂ ಕೋರ್ಟ್ ನೀಡಿದೆ.

ಸುಧೀರ್ ಕಪೂರ್ ಎಂಬಾತ ಸಲ್ಲಿಸಿರುವ ಅರ್ಜಿಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಸುಧೀರ್ ಪತ್ನಿ ಸುಮನ್ ಕಪೂರ್ ಎಂಬಾಕೆ ಮೂರು ಬಾರಿ ಪತಿಯ ಒಪ್ಪಿಗೆ ಪಡೆಯದೇಯೇ ಗರ್ಭ ಕಳೆದುಕೊಂಡಿದ್ದು, ಇದು ಸುಧೀರ್‌ಗೆ ಅತೀವ ವೇದನೆ ನೀಡಿದ ಕಾರಣ ಮನನೊಂದ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ತನ್ನ ಪತ್ನಿಯು ಅಮೆರಿಕದಲ್ಲಿ ತನ್ನ ವೃತ್ತಿಯ ಮೇಲೆಯೇ ಹೆಚ್ಚು ಆಸಕ್ತಿ ಹೊಂದಿದ್ದಳೇ ವಿನಹ ಕುಟುಂಬದ ಪಾಲನೆಯ ಕುರಿತು ಆಕೆಗೆ ಕಾಳಜಿ ಇರಲಿಲ್ಲ ಎಂದು ತನ್ನ ಅರ್ಜಿಯಲ್ಲಿ ದೂರಿದ್ದರು.

ಇದಲ್ಲದೆ ತನ್ನ ಹೆತ್ತವರು ಮತ್ತು ಕುಟುಂಬದ ಇತರ ಸದಸ್ಯರನ್ನು ಸುಮನ್ ಒಂದೇ ಸವನೆ ನಿಂದಿಸುತ್ತಿದ್ದಳು ಎಂದೂ ಅರ್ಜಿಯಲ್ಲಿ ದೂರಲಾಗಿದೆ. ಕೌಟುಂಬಿಕ ನ್ಯಾಯಾಲಯವೊಂದು ಈ ಎಲ್ಲ ಆಧಾರಗಳ ಮೇಲೆ ವಿಚ್ಛೇದನಕ್ಕೆ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿದ ಸುಮನ್ ದೆಹಲಿ ಹೈಕೋರ್ಟಿಗೆ ಮನವಿ ಮಾಡಿದ್ದು, ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ದೃಢಪಡಿಸಿತ್ತು. ಬಳಿಕ ಆಕೆ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದು, ಸುಪ್ರೀಂ ಕೋರ್ಟ್ ಸಹ ಈ ಮನವಿಯನ್ನು ಎತ್ತಿ ಹಿಡಿದಿದೆ.

ಸುಪ್ರೀಂ ಕೋರ್ಟ್ ಹಿಂದಿನಹಲವಾರು ತೀರ್ಪುಗಳನ್ನು ದೃಷ್ಟಾಂತವಾಗಿಸಿದ್ದು, ಸುಮನ್ ನಡೆದುಕೊಂಡ ರೀತಿಯು ಮಾನಸಿಕ ಕ್ರೌರ್ಯವಾಗಿದ್ದು ವಿಚ್ಛೇದನದ ಡಿಕ್ರಿ ಪಡೆಯಲು ಸುಧೀರ್ ಅರ್ಹ ಎಂದು ಹೇಳಿದೆ.

ಅದಾಗ್ಯೂ, ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಆತ ಇನ್ನೊಬ್ಬ ಹುಡುಗಿಯನ್ನು ವಿವಾಹವಾಗಿರುವ ತಪ್ಪಿಗೆ ಸರ್ವೋಚ್ಚ ನ್ಯಾಯಾಲಯ ಆತನಿಗೆ ಐದು ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತನಿಖೆಗೆ ಸೇನೆ ಸಹಕರಿಸಲಿದೆ: ಆಂಟನಿ
ಲೋಕಸಭೆಗೆ ಜೆಡಿ(ಯು) ಸದಸ್ಯರ ರಾಜೀನಾಮೆ
ಆಳ್ವ ವಿರುದ್ಧ ಶಿಸ್ತು ಕ್ರಮಕ್ಕೆ ಹೈಕಮಾಂಡ್ ಆದೇಶ
ಕರ್ನಾಟಕದಲ್ಲಿ ಕಾಂಗ್ರೆಸ್ ಟಿಕೆಟ್ ಮಾರಾಟವಾಗಿತ್ತು: ಆಳ್ವ
ಅರುಷಿ: ಮರಣೋತ್ತರ ದಾಖಲೆಗಾಗಿ ಸಿಬಿಐ ದಾಳಿ
ಸ್ಪೋಟದ ರೂವಾರಿ ತಾನೆಂದು ಒಪ್ಪಿಕೊಂಡ ಕರ್ನಲ್