ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ
ಚಂದ್ರಗ್ರಹದ ಅನ್ವೇಷಣೆಗಾಗಿ ಉಡಾವಣೆ ಮಾಡಲಾಗಿರುವ ಭಾರತದ ಪ್ರಥಮ ದೇಶೀಯ ಗಗನ ನೌಕೆ ಚಂದ್ರಯಾನ-1 ಶನಿವಾರ ಸಾಯಂಕಾಲ ಐದು ಗಂಟೆಯ ವೇಳೆಗೆ ಚಂದ್ರನ ಕಕ್ಷೆಯನ್ನು ಸೇರಿದೆ. ಇಸ್ರೋದ ಹೆಮ್ಮೆಯ ಚಂದ್ರಯಾನವನ್ನು ಅಕ್ಟೋಬರ್ 22ರಂದು ಶ್ರೀಹರಿಕೋಟದಿಂದ ಯಶಸ್ವಿಯಾಗಿ ಉಡಾಯಿಸಲಾಗಿತ್ತು.

ಈ ಗಗನ ನೌಕೆಯು ಎರಡು ವರ್ಷಗಳ ಕಾಲ ನಭೋಮಂಡಲದಲ್ಲಿದ್ದು, ಚಂದ್ರನ ಮೇಲೈಯ ವೈಜ್ಞಾನಿಕ ಅಧ್ಯಯನ ನಡೆಸಲಿದೆ.

ಬಾಹ್ಯಾಕಾಶ ವಿಜ್ಞಾನಿಗಳು ಶನಿವಾರ ಐದು ಗಂಟೆಗೆ ಚಂದ್ರಯಾನವನ್ನು ಚಂದ್ರನ ಕಕ್ಷೆಗೆ ತೂರಿಸುವ ಪ್ರಕ್ರಿಯೆ ನಡೆಸಿದ್ದು, ಈ ಯೋಜನೆಯ ಮಹತ್ವದ ಅಂಗವಾಗಿದೆ.

ಈ ಕಾರ್ಯವು ಸಾಯಂಕಾಲ ಸುಮಾರು ಐದು ಗಂಟೆಗೆ ಆರಂಭವಾಗಿ 800 ಸೆಕುಂಡುಗಳ ಕಾಲ ಅಂದರೆ ಸುಮಾರು 13 ನಿಮಿಷಗಳ ಕಾಲ ಮುಂದುವರಿಯಿತು.

ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯದ ಬಳಿಕ ಉಪಗ್ರಹವು ಚಂದ್ರನ ಸುತ್ತ 7,500 ಕಿ.ಮೀ x 500 ಕಿ.ಮೀ ವರ್ತುಲವಾಗಿ ಇರಲಿದೆ. ಚಂದ್ರಯಾನವು ಚಂದ್ರನ ಕಕ್ಷೆಯನ್ನು ಸೇರಿದ ಬಳಿಕ ಇದನ್ನು ಚಂದ್ರನ ಗುರತ್ವಾಕರ್ಷಣ ಸೆರೆಹಿಡಿಯಲಿದೆ ಎಂದು ಸತೀಶ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಸ್ಲಿಂ ಬಹುಪತ್ನಿತ್ವ ನಿಯಂತ್ರಣಕ್ಕೆ ಕಾನೂನು ಪ್ರಸ್ತಾಪ
ದೋಡಾ ಬೆಟ್ಟದಲ್ಲಿ ಉಗ್ರರ ಸೆರೆ ಹಿಡಿದ ಸೇನೆ
ಚಟರ್ಜಿ ಆಸ್ಪತ್ರೆಯಿಂದ ಬಿಡುಗಡೆ
ಸಣ್ಣಪುಟ್ಟ ಅಪರಾಧಗಳಿಗೆ ಜೈಲು ಬೇಡ: ಸು.ಕೋ
ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ವಿಚ್ಛೇದನಕ್ಕೆ ಪ್ರಬಲ ಕಾರಣ: ಸುಪ್ರೀಂ ಕೋರ್ಟ್
ತನಿಖೆಗೆ ಸೇನೆ ಸಹಕರಿಸಲಿದೆ: ಆಂಟನಿ