ಉತ್ತರ ಪ್ರದೇಶದ ಮೀರತ್‌ನ ಝಕೀರ್ ನಗರದ ಬೆಂಗಾಲಿ ಬಸ್ತಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಸಾವಿಗೀಡಾಗಿದ್ದು, ಇತರ ಎಂಟು ಮಂದಿ ಗಾಯಗೊಂಡಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ.
ಸಾಯಂಕಾಲ ಸುಮಾರು ನಾಲ್ಕು ಗಂಟೆಯ ವೇಳೆಗೆ ಸ್ಫೋಟ ಸಂಭವಿಸಿದೆ.
ಇದು ಭಯೋತ್ಪಾದನಾ ಕೃತ್ಯ ಅಲ್ಲ, ಇದು ಗುಜುರಿಯಲ್ಲಿ ಸಂಭವಿಸಿರುವ ಸ್ಫೋಟ. ಸಜೀವ ಬ್ಯಾಟರಿಯಿಂದ ಲೋಹವನ್ನು ಹೊರತೆಗೆಯುತ್ತಿರುವ ವೇಳೆಗೆ ಸ್ಫೋಟ ಸಂಭವಿಸಿದೆ ಎಂದು ಮೀರತ್ ಪೊಲೀಸ್ ಅಧಿಕಾರಿ ರಘವೀರ್ ಲಾಲ್ ಹೇಳಿದ್ದಾರೆ.
ಕಂಟೋನ್ಮೆಂಟ್‌ನ ಗುಜುರಿ ವಸ್ತುಗಳಲ್ಲಿ ಸೇರಿದ್ದ ಸಜೀವ ಮಾರ್ಟರ್ ಸೆಲ್ ಇದಾಗಿದ್ದು ಚಿಂದಿ ಆಯುವವರು ಅದರಿಂದ ಕಂಚು ತೆಗೆಯಲು ಯತ್ನಿಸಿದಾಗ ಸ್ಫೋಟ ಸಂಭವಿಸಿದೆ.
ಸ್ಫೋಟದಿಂದ ಸತ್ತವರಲ್ಲಿ ಹೆಚ್ಚಿನವರು ಚಿಂದಿ ಆಯುವ ಮಕ್ಕಳು.
|