ಮಾಲೆಗಾವ್ ಸ್ಪೋಟ ಪ್ರಕರಣದಲ್ಲಿ ಲೆಪ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಹೊರತುಪಡಿಸಿದಂತೆ ಇತರ ಯಾವುದೇ ಮಿಲಿಟರಿ ಆಧಿಕಾರಿಗಳ ಸಹಭಾಗಿತ್ವವನ್ನು ಉಗ್ರ ನಿಗ್ರಹ ದಳ ನಿರಾಕರಿಸಿದೆ ಮತ್ತು ಸ್ಪೋಟದಲ್ಲಿ ಗುಜಾರಾತ್‌ನ ಮೂವರು ವಿಎಚ್‌ಪಿ ನಾಯಕರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಬಂಧಿಸಲ್ಪಟ್ಟ ಅಪಾದಿತ ಅಬಿನವ್ ಭಾರತದ ಸದಸ್ಯ ಸಮೀರ್ ಕುಲಕರ್ಣಿ ಅವರೊಂದಿಗೆ ಈ ಮೂವರು ಸಂಪರ್ಕ ಹೊಂದಿರುವುದಾಗಿ ಅಪಾದಿಸಲಾಗಿದೆ.
ಉಗ್ರ ನಿಗ್ರಹ ದಳದ ಹೇಮಂತ್ ಕಾರ್ಕಾರೆ ಅವರು ತಾವು ಯಾವುದೇ ಅಧಿಕಾರಿಗಳನ್ನು ಪ್ರಶ್ನಿಸುತ್ತಿಲ್ಲ ಮತ್ತು ಇನ್ನೂ ಇಬ್ಬರು ಸೇವೆಯಲ್ಲಿರುವ ಮಿಲಿಟರಿ ಅಧಿಕಾರಿಗಳು ಮತ್ತು ನಿವೃತ್ತ ಮೇಜರ್ ಸಂಶಸ್ಪಾದರಾಗಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದರು.
"ಪುರೋಹಿತ್‌ರನ್ನುಳಿದಂತೆ ಬೇರಾರು ಸ್ಪೋಟ ಪ್ರಕರಣದಲ್ಲಿ ಪಾಲ್ಗೊಂಡಿಲ್ಲ. ಇತರ ಯಾವುದೇ ಅಧಿಕಾರಿಯನ್ನು ಪ್ರಶ್ನಿಸಲು ನಾವು ಮಿಲಿಟರಿಯಿಂದ ಅನುಮತಿ ಪಡೆದಿಲ್ಲ" ಎಂದು ಹೇಮಂತ್ ಹೇಳಿದರು.
ಎಟಿಸ್ ಮುಖ್ಯಸ್ಥರು ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ತಿಳಿಸಿದ ಅವರು ತನಿಖೆಯ ಮೇಲೆ ಪ್ರಭಾವ ಬೀರುವುದರಿಂದ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ಎಟಿಸ್ ಪುರೋಹಿತ್‌ರ ಲಾಪ್‌ಟಾಪ್ ಅನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದು ಇದರಲ್ಲಿ ಈ ರಹಸ್ಯದ ಬಗ್ಗೆ ಹೆಚ್ಚಿನ ಅಮೂಲ್ಯ ಮಾಹಿತಿಗಳು ಇವೆ ಎಂದು ನಂಬಲಾಗಿದೆ ಎಂದು ಹೇಮಂತ್ ತಿಳಿಸಿದರು. ಮೂರು ವರ್ಷಗಳ ಹಿಂದೆ ಪುರೋಹಿತ್ ಕಾಶ್ಮೀರದಲ್ಲಿದ್ದಾಗ ಖರೀದಿಸಿದ್ದ ಲಾಪ್‌ಟಾಪ್, ಅವರು ಮುಂಬಯಿಗೆ ಕರೆತಂದಿನಿಂದ ಕಾಣಿಸದಾಗಿದೆ.
ಪುರೋಹಿತ್ ಅವರು ಸ್ಪೋಟ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಪ್ರಥಮ ಮಿಲಿಟರಿ ಅಧಿಕಾರಿಯಾಗಿದ್ದು ಮಾಲೆಗಾವ್ ಸ್ಪೋಟದಲ್ಲಿ ತಮ್ಮ ಕೈವಾಡವನ್ನು ಒಪ್ಪಿಂಡಿದ್ದಾರೆ. |