ಗೋವಾ ಶಿಕ್ಷಣ ಸಚಿವ ಅಟನಾಸಿಯೋ ಮಾನ್ಸೆರ್ರಟ್ಟೆ ಅವರ ಪುತ್ರ ರೋಹಿತ್ ಮಾನ್ಸೆರ್ರಟ್ಟೆ ತಮ್ಮ 14ರ ಹರೆಯದ ಮಗಳನ್ನು ಬಲಾತ್ಕಾರಿಸಿದ್ದಾರೆ ಎಂದು ದೂರು ದಾಖಲಿಸಿದ್ದ ಜರ್ಮನ್ ಮಹಿಳೆ ದೂರನ್ನು ಹಿಂದಕ್ಕೆ ಪಡೆಯುವ ಮೂಲಕ ಈ ಪ್ರಕರಣಕ್ಕೆ ತಿರುವು ಬಂದಿದೆ.ರೋಹಿತ್ ಮಾನ್ಸೆರ್ರಟ್ಟೆ ಬಂಧಿಸಲ್ಪಟ್ಟ ಐದು ದಿನಗಳೊಳಗೆ ಈ ಬೆಳವಣಿಗೆಯಾಗಿದೆ. ಕೇಸ್ ಹಿಂದಕ್ಕೆ ಪಡೆಯುವ ಅವರ ನಿರ್ಧಾರದ ಹಿಂದಿನ ಕಾರಣಗಳು ವಿಷಾದಕರವಾಗಿವೆ.ಫಡೇಲಾ ಪ್ಯೂಚ್ಸ್ ರೋಹಿತ್ ವಿರುದ್ಧ ಅಕ್ಟೋಬರ್ 14ರಂದು ದೂರು ದಾಖಲಿಸಿದ್ದರು. ಸಚಿವ ಮಾನ್ಸೆರ್ರಟ್ಟೆ ಅವರ ಹೆಸರಿನಲ್ಲಿ ದಾಖಲಾಗಿರುವ ಮೊಬೈಲ್ ಫೋನ್‌ನಿಂದ ತಮ್ಮ ಮಗಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗುತ್ತಿದ್ದುದರಿಂದ ಸಚಿವರ ಮೇಲೂ ಅಪರಾಧಕ್ಕೆ ನೆರವು ನೀಡಿದ ಪ್ರಕರಣ ದಾಖಲಿಸಬೇಕೆಂದು ಜರ್ಮನ್ ಮಹಿಳೆ ಕೋರಿದ್ದರು. ಅಪ್ರಾಪ್ತವಯಸ್ಕ ಜರ್ಮನ್ ಹುಡುಗಿಯ ಹೇಳಿಕೆ ಮತ್ತು ವೈದಕೀಯ ತಪಾಸಣಾ ವರದಿಯ ಆಧಾರದಲ್ಲಿ ಕಳೆದ ಭಾನುವಾರ ರೋಹಿತ್‌ರನ್ನು ಬಂದಿಸಲಾಗಿತ್ತು. ಮಾನವ ಹಕ್ಕು ನ್ಯಾಯವಾದಿ ಅರಿಸ್ ರಾಡ್ರಿಗಸ್ ಅವರು ಬಲತ್ಕಾರಕ್ಕೆ ಒಳಾಗಾದ ಹುಡುಗಿಯ ತಾಯಿ ಎಷ್ಟೊಂದು ಒತ್ತಡಕ್ಕೆ ಒಳಾಗಿದ್ದಾರೆ ಎಂದರೆ ಪ್ರಕರಣ ಸಾಗುತ್ತಿರುವ ರೀತಿಯಿಂದ ಭ್ರಮನಿರಸನಗೊಂಡ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ." ಜರ್ಮನ್ ಮಹಿಳೆಯ ಪ್ರಕಾರ ಇಡಿಯ ವ್ಯನಸ್ಥೆಯೆ ಸೋತಿದೆ ಮತ್ತು ಆಕೆ ದೂರನ್ನು ಹಿಂದಕ್ಕೆ ಪಡೆಯುವುದಕ್ಕೆ ಇದೇ ಕಾರಣ. ಬಲಿಪಶುವಾದ ಅವರ ಮಗಳನ್ನೆ ಈ ಪ್ರಕರಣದಲ್ಲಿ ಅಪಾದಿತೆಯಾಗಿಸಲಾಗುತ್ತಿದೆ ಆದ್ದರಿಂದ ಅವರು ಪ್ರಕರಣ ಮುಂದುವರೆಸಲು ಬಯಸದೆ ದೂರನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಬಗ್ಗೆ ನಾನು ರಾಜ್ಯಪಾಲ ಸಿದ್ದು ಅವರಲ್ಲಿ ಚರ್ಚಿಸಲಿದ್ದೇನೆ. ಗೋವಾ ರಾಜ್ಯಪಾಲ ಸಿದ್ದು ಅವರ ಭೋಟಿಯ ಸಂದರ್ಭ ಜರ್ಮನ್ ಮಹಿಳೆಯೂ ಸಹ ಉಪಸ್ಥಿತರಿರುತ್ತಾರೆ. ಭೇಟಿಯ ನಂತರ ನಾವು ಸುದ್ದಿಗೋಷ್ಠಿಯಲ್ಲಿ ಮಾತಾನಾಡುತ್ತೇವೆ. ತಾಯಿ ಮತ್ತು ಅವರ ಮಗಳು ಬಲಿಪಶುಗಳಾಗಿದ್ದಾರೆ" ಎಂದು ಅರಿಸ್ ಹೇಳಿದ್ದಾರೆ. |