ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಂಸದ ಮಿಲಿಂದ್ ದೇವ್ರಾ- ಪೂಜಾ ಶೆಟ್ಟಿ ವಿವಾಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಸದ ಮಿಲಿಂದ್ ದೇವ್ರಾ- ಪೂಜಾ ಶೆಟ್ಟಿ ವಿವಾಹ
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಅವರ ಪುತ್ರ, ದಕ್ಷಿಣ ಮುಂಬಯಿ ಸಂಸದ ಮಿಲಿಂದ್ ದೇವ್ರಾ ಅವರು ಚಲನಚಿತ್ರೋದ್ಯಮಿಯ ಪುತ್ರಿ ಪೂಜಾ ಶೆಟ್ಟಿ ಅವರನ್ನು ಸರಳ ಸಮಾರಂಭವೊಂದರಲ್ಲಿ ಭಾನುವಾರ ಮುಂಬಯಿಯಲ್ಲಿ ವಿವಾಹವಾದರು.

ಯಾವುದೇ ಅಬ್ಬರವಿಲ್ಲದೆ ನಡೆದ ಈ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. 28ರ ಹರೆಯದ ಪೂಜಾ ಶೆಟ್ಟಿ ಅವರು ಈಗ ಅನಿಲ್ ಅಂಬಾನಿ ಖರೀದಿಸಿರುವ ಅಡ್‌ಲ್ಯಾಬ್ಸ್ ಮಲ್ಟಿಪ್ಲೆಕ್ಸ್‌ನ ನಿರ್ದೇಶಕರಲ್ಲೊಬ್ಬರು.

ತಂದೆ ಮನಮೋಹನ್ ಶೆಟ್ಟಿ ಅವರ 'ವಾಕ್ ವಾಟರ್ ಮೀಡಿಯಾ' ಚಿತ್ರ ನಿರ್ಮಾಣ ಸಂಸ್ಥೆಯ ನೇತೃತ್ವ ವಹಿಸಿದ್ದು, ಅವರಿಬ್ಬರೂ ಅಡ್‌ಲ್ಯಾಬ್ಸ್ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಮನಮೋಹನ್ ಶೆಟ್ಟಿ ಅವರು 1978ರಲ್ಲಿ ಅಡ್‌ಲ್ಯಾಬ್ಸ್‌ನ್ನು ಹುಟ್ಟುಹಾಕಿದ್ದು, ಅದರ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾಗಿದ್ದರು. ಅದನ್ನು ಅನಿಲ್ ಅಂಬಾನಿ ಇತ್ತೀಚೆಗೆ ಖರೀದಿಸಿದ್ದರು.

ಪೂಜಾ ಮತ್ತು ಮಿಲಿಂದ್ ಇಬ್ಬರೂ ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು, ನವದೆಹಲಿಯಲ್ಲಿ ಮೂರು ವರ್ಷಗಳ ಹಿಂದೆ ಪರಸ್ಪರ ಭೇಟಿಯಾಗಿದ್ದರು.

ಮುಂಬಯಿಯಲ್ಲಿ ನಡೆಯಲಿರುವ ವಿವಾಹದ ಔತಣಕೂಟದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮುರಳಿ ದೇವ್ರಾ ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಮುಂಬಯಿಯ ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅರುಣಾಚಲ ಪ್ರದೇಶ ನಮ್ಮದು: ಪ್ರಣಬ್
ಗೋವಾ ಅತ್ಯಾಚಾರ: ದೂರು ವಾಪಸ್ ಪಡೆದ ತಾಯಿ
ಸ್ಪೋಟ: ಮೂವರು ವಿಎಚ್‌ಪಿ ಸದಸ್ಯರ ಮೇಲೆ ಶಂಕೆ
ಒಬಾಮರೆಡೆಗೆ ಎಚ್ಚರಿಕೆಯ ಹೆಜ್ಜೆ: ಪ್ರಣಬ್
ಮೀರತ್‌ನಲ್ಲಿ ಸ್ಫೋಟ: ಐದು ಸಾವು
ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ