ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಾಧ್ವಿಗೆ ಶ್ರೇಷ್ಠ ವಕೀಲರನ್ನು ಒದಗಿಸಲು ಸಿದ್ಧ: ಠಾಕ್ರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಧ್ವಿಗೆ ಶ್ರೇಷ್ಠ ವಕೀಲರನ್ನು ಒದಗಿಸಲು ಸಿದ್ಧ: ಠಾಕ್ರೆ
ಮುಂಬೈ: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಸಾಧ್ವಿ ಪ್ರಗ್ಯಾಸಿಂಗ್ ಅವರಿಗೆ ಅತ್ಯುತ್ತಮ ವಕೀಲರನ್ನು ಒದಗಿಸಲು ಶಿವಸೇನೆ ಸಿದ್ಧವಾಗಿದೆ ಎಂದು ಹೇಳಿರುವ ಸೇನಾ ಮುಖ್ಯಸ್ಥ ಬಾಳಾಠಾಕ್ರೆ, "ತಾನು ಬಂಧನಕ್ಕಾಗಿ ಕಾಯುತ್ತಿದ್ದೇನೆ" ಎಂದು ಹೇಳುವ ಮೂಲಕ ತನ್ನ ಬಂಧನಕ್ಕೆ ಒತ್ತಾಯಿಸಿರುವ ಕಾಂಗ್ರೆಸ್ ಸಂಸದ ಗುರುದಾಸ್ ಕಾಮತ್ ಕುರಿತು ವಂಗ್ಯವಾಡಿದ್ದಾರೆ.

"ಯಾವಾಗ ಕಾಂಗ್ರೆಸಿಗರು ಮುಸ್ಲಿಂ ಒಲೈಕೆ ಮಾಡುತ್ತಾರೋ, ಆವಾಗೆಲ್ಲ ನನ್ನ ಬಂಧನದ ಕನಸು ಕಾಣುತ್ತಾರೆ" ಎಂದು ಅವರು ಶಿನಸೇನಾ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಕಾಂಗ್ರೆಸ್ಸನ್ನು ಟೀಕಿಸಿದ್ದಾರೆ.

ವಿಲಾಸ್‌ರಾವ್ ದೇಶ್‌ಮುಖ್ ಸರ್ಕಾರ ನಾಲ್ಕು ವರ್ಷ ಪೂರೈಸಿರುವ ಸಲುವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಕಾಮತ್, ಸಾಧ್ವಿಯನ್ನು ಬೆಂಬಲಿಸಿರುವ ಠಾಕ್ರೆಯನ್ನು ಜೈಲಿಗೆ ತಳ್ಳಬೇಕು ಎಂದು ಒತ್ತಾಯಿಸಿದ್ದರು.

"ಸ್ಫೋಟ ಪ್ರಕರಣವನ್ನು ಒತ್ತಡದಲ್ಲಿ ತನಿಖೆ ಮಾಡಲಾಗುತ್ತಿದ್ದು, ಹಿಂದೂ ಭಯೋತ್ಪಾದಕರು ಎಂಬ ಬ್ರಾಂಡ್ ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ" ಎಂದು ಠಾಕ್ರೆ ಹೇಳಿದ್ದಾರೆ. "ಇಸ್ಲಾಮಿಕ್ ಉಗ್ರರರನ್ನು ಪತ್ತೆ ಹಚ್ಚಲು ತನಿಖಾ ತಂಡವನ್ನು ಮಸೀದಿಗಳೊಳಗೆ ಕಳುಹಿಸಬೇಕು" ಎಂದು ಅವರು ಕಳೆದ ತಿಂಗಳಲ್ಲಿ ಒತ್ತಾಯಿಸಿದ್ದರು.

"ತಾನು ಬಂಧನಕ್ಕೀಡಾಗುವ ಕುರಿತು ಎಂದಿಗೂ ಭಯಗೊಂಡಿಲ್ಲ. ಹಿಂದೂಸ್ಥಾನದಲ್ಲಿ ಹಿಂದೂಗಳನ್ನು ಬೆಂಬಲಿಸಿರುವುದಕ್ಕೆ ತಾನು ಬಂಧನಕ್ಕೀಡಾಗಬೇಕೋ ಇಲ್ಲ, ಮಹಾರಾಷ್ಟ್ರದಲ್ಲಿ ಮರಾಠಿಗಳಿಗೆ ಎದುರಾಗಿದ್ದ ಅಪಾಯವನ್ನು ಕಿತ್ತೆಸೆದಿರುವುದಕ್ಕೆ ಬಂಧನಕ್ಕೀಡಾಗಬೇಕೋ ಎಂಬುದನ್ನು ಸರಕಾರ ಸ್ಪಷ್ಟಪಡಿಸಲಿ" ಎಂದು ಠಾಕ್ರೆ ಸರಕಾರವನ್ನು ಕೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ವಸಂತರಾವಾ ನಾಯ್ಕ್ ಅವರು ತನ್ನ ಬಂಧಿಸಿ ಪುಣೆಯ ಯರವಾಡ ಜೈಲಿಗೆ ಕಳುಹಿಸಿದ್ದಾಗ ಮಹಾರಾಷ್ಟ್ರ ಹೊತ್ತಿ ಉರಿದಿತ್ತು ಮತ್ತು ಅವರು ಶಾಂತಿಗಾಗಿ ಮನವಿ ಮಾಡುವ ಪರಿಸ್ಥಿತಿ ಬಂದೊದಗಿತ್ತು ಎಂದು ಠಾಕ್ರೆ ಸಂಪಾದಕೀಯದಲ್ಲಿ ನೆನಪಿಸಿದ್ದಾರೆ.

ಸಾಧ್ವಿ ಪ್ರಕರಣದಲ್ಲಿ ತನ್ನನ್ನು ಬಂಧಿಸಿದಲ್ಲಿ ಹಿಂದುತ್ವ ಶಕ್ತಿಗಳನ್ನು ಧಮನಿಸಿ, ಮುಸ್ಲಿಂ ಮತಬ್ಯಾಂಕನ್ನು ಸದೃಢಗೊಳಿಸುವ ನಿಮ್ಮ ಲೆಕ್ಕಾಚಾರ ತಪ್ಪಬಹುದು ಎಂದೂ ಅವರು ಕಾಗ್ರೆಸ್ಸನ್ನು ಎಚ್ಚರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಬ್ಬದ ಹಸು ಕೊಂದವಗೆ 1ವರ್ಷ ಜೈಲು
ಮಹಾರಾಷ್ಟ್ರ ಸರ್ಕಾರಕ್ಕೆ ಸು.ಕೋ. ನೋಟೀಸ್
ಜಿಹಾದ್ ಮರುವ್ಯಾಖ್ಯಾನಕ್ಕೆ ಇಸ್ಲಾಮಿಕ್ ಪಂಡಿತರ ಕರೆ
ಗುಜರಾತ್ ಸ್ವಾಮಿಗೂ ಮಾಲೆಗಾಂವ್‌ಗೂ ನಂಟು?
ಸಂಸದ ಮಿಲಿಂದ್ ದೇವ್ರಾ- ಪೂಜಾ ಶೆಟ್ಟಿ ವಿವಾಹ
ಅರುಣಾಚಲ ಪ್ರದೇಶ ನಮ್ಮದು: ಪ್ರಣಬ್