ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಯಾಣದಲ್ಲಿದ್ದುದರಿಂದ ಒಬಾಮ ಕರೆ ಸ್ವೀಕರಿಸಿಲ್ಲ: ಪ್ರಧಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಯಾಣದಲ್ಲಿದ್ದುದರಿಂದ ಒಬಾಮ ಕರೆ ಸ್ವೀಕರಿಸಿಲ್ಲ: ಪ್ರಧಾನಿ
PTI
ತಾವು ಪ್ರಯಾಣದಲ್ಲಿದ್ದುದರಿಂದ ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬರಾಕ್ ಒಬಾಮ ಅವರ ಕರೆಯನ್ನು ಸ್ವೀಕರಿಸಿಲ್ಲ ಮತ್ತು "ಮುಂದಿನ ದಿನಗಳಲ್ಲಿ ನಾನು ಕರೆಯನ್ನು ಸ್ವೀಕರಿಸಬಹುದು" ಎಂದು ಫ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

"ನನಗೆ ಶನಿವಾರದಂದು ಕರೆ ಬಂದಿತ್ತು ಆದರೆ ನಾನು ಪ್ರಯಾಣದಲ್ಲಿದ್ದುದರಿಂದ ಸ್ವೀಕರಿಸುವುದು ಸಾಧ್ಯವಾಗಲಿಲ್ಲ" ಎಂದು ತಮ್ಮ ಎರಡು ರಾಷ್ಟ್ರಗಳ ಭೇಟಿಯನ್ನು ಮುಗಿಸಿ ಸ್ವದೇಶಕ್ಕೆ ಮರಳುತ್ತಿರುವ ಮನಮೋಹನ್ ಸಿಂಗ್ ವರದಿಗಾರರಿಗೆ ತಿಳಿಸಿದರು.

ಒಬಾಮ ಆಡಳಿತದಡಿಯಲ್ಲಿ ಭಾರತ ಮತ್ತು ಅಮೆರಿಕ ಸಂಬಂಧಗಳ ಕುರಿತ ಪ್ರಶ್ನೆಯೊಂದಕ್ಕೆ, "ಭಾರತ ಮತ್ತು ಅಮೆರಿಕಾದ ಸಂಬಂಧಗಳು ಸೂಕ್ತವಾದ ರೀತಿಯಲ್ಲಿ ಮುಂದುವರೆಯುವುದು ಎಂಬ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ" ಎಂದು ಪ್ರಧಾನಿ ನುಡಿದರು.

ಒಬಾಮ ಅವರ ಅಜ್ಜಿ ಮೃತರಾದ ಸಂದರ್ಭ ತಾವು ಸಂತಾಪ ವ್ಯಕ್ತಪಡಿಸಿದ್ದಾಗಿ ಪ್ರಧಾನಿ ಇದೇ ವೇಳೆ ತಿಳಿಸಿದರು.

ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಒಬಾಮ, ಪಾಕಿಸ್ತಾನಿ ಪ್ರಧಾನಿ ಅಸಿಫ್ ಅಲಿ ಜರ್ದಾರಿ ಅವರೂ ಸೇರಿದಂತೆ 15 ಅಂತಾರಾಷ್ಟ್ರೀಯ ನಾಯಕರನ್ನು ಫೋನ್ ಮೂಲಕ ಸಂಪರ್ಕಿಸಿ ಮಾತಾನಾಡಿದ್ದಾರೆ. ಆದರೆ ಅವರು ಮನಮೋಹನ್ ಸಿಂಗ್‌ರಿಗೆ ಕರೆ ಮಾಡಿಲ್ಲದಿರುವುದು ನವದೆಹಲಿಯ ವಿದೇಶಿ ನೀತಿ ಪ್ರತಿಷ್ಠಾನವನ್ನು ಚಿಂತೆಗೀಡು ಮಾಡಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿದ್ದವು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಗಲ್ಲು ಶಿಕ್ಷೆ'ಯಿಂದ ಪಾರಾದ ನಾಯಿ ಮತ್ತೆ ಕೋರ್ಟಿಗೆ!
ಸಾಧ್ವಿಗೆ ಶ್ರೇಷ್ಠ ವಕೀಲರನ್ನು ಒದಗಿಸಲು ಸಿದ್ಧ: ಠಾಕ್ರೆ
ಗಬ್ಬದ ಹಸು ಕೊಂದವಗೆ 1ವರ್ಷ ಜೈಲು
ಮಹಾರಾಷ್ಟ್ರ ಸರ್ಕಾರಕ್ಕೆ ಸು.ಕೋ. ನೋಟೀಸ್
ಜಿಹಾದ್ ಮರುವ್ಯಾಖ್ಯಾನಕ್ಕೆ ಇಸ್ಲಾಮಿಕ್ ಪಂಡಿತರ ಕರೆ
ಗುಜರಾತ್ ಸ್ವಾಮಿಗೂ ಮಾಲೆಗಾಂವ್‌ಗೂ ನಂಟು?