ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಹುಲ್ ರಾಜ್ ಪ್ರಕರಣ ನ್ಯಾಯಾಂಗ ತನಿಖೆ ಇಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಹುಲ್ ರಾಜ್ ಪ್ರಕರಣ ನ್ಯಾಯಾಂಗ ತನಿಖೆ ಇಲ್ಲ
ಮುಂಬೈ ಬೆಸ್ಟ್ ಬಸ್ಸಿನಲ್ಲಿ ಪಿಸ್ತೂಲ್ ಹಿಡಿದು ದಾಂಧಲೆ ಎಬ್ಬಿಸಿ ಬಳಿಕ ಪೊಲೀಸರ ಗುಂಡಿಗೆ ಬಲಿಯಾದ ಬಿಹಾರದ ಯವಕ ರಾಹುಲ್ ರಾಜ್ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

PTI
ತನ್ನ ಪುತ್ರನೊಬ್ಬ ಅಮಾಯಕ, ಆತ ಭಯೋತ್ಪಾದಕನಲ್ಲ ಎಂದು ರಾಹುಲ್ ರಾಜ್ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕೆಲವೇ ದಿನಗಳ ಬೆನ್ನಲ್ಲೇ ನ್ಯಾಯಾಲಯದ ಈ ನಿರ್ಧಾರ ಹೊರಬಿದ್ದಿದೆ.

ಮುಂಬೈಯಲ್ಲಿ ಡಬ್ಬಲ್ ಡೆಕ್ಕರ್ ಬಸ್ಸನ್ನು ಅಪಹರಿಸಿ, ಬಸ್ಸಿನ ಪ್ರಯಾಣಿಕರು ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಗದ್ದಲ ಎಬ್ಬಿಸಿದ ಬಳಿಕ ಪೊಲೀಸರ ಗುಂಡಿನಿಂದಾಗಿ ಸಾವಿಗೀಡಾಗಿದ್ದ.

ತಾನು ರಾಜ್‌ಠಾಕ್ರೆಯನ್ನು ಕೊಲ್ಲಲು ಬಂದಿದ್ದೇನೆ ಎಂದು ಉನ್ಮತ್ತನಂತಾಡುತ್ತಿದ್ದ ಆತ ಪಿಸ್ತೂಲು ಹಿಡಿದು ಪ್ರಯಾಣಿಕರನ್ನು ಬೆದರಿಸಿ ಒತ್ತೆಯಾಳಾಗಿಸಿಕೊಂಡಿದ್ದ.

ಈ 23ರ ಹರೆಯದ ಪಟ್ನಾ ಯುವಕನ ಸಾವು ರಾಜಕೀಯ ಬಿರುಗಾಳಿಯನ್ನೆಬ್ಬಿಸಿತ್ತು. ರಾಹುಲ್ ರಾಜ್‌ನ ಕುಟಂಬ ಮತ್ತು ಬಿಹಾರದ ರಾಜಕೀಯ ನಾಯಕರು ಈತನ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜೀನಾಮೆ ನೀಡಿದ ಮಾರ್ಗರೆಟ್ ಆಳ್ವ
ಪ್ರಯಾಣದಲ್ಲಿದ್ದುದರಿಂದ ಒಬಾಮ ಕರೆ ಸ್ವೀಕರಿಸಿಲ್ಲ: ಪ್ರಧಾನಿ
'ಗಲ್ಲು ಶಿಕ್ಷೆ'ಯಿಂದ ಪಾರಾದ ನಾಯಿ ಮತ್ತೆ ಕೋರ್ಟಿಗೆ!
ಸಾಧ್ವಿಗೆ ಶ್ರೇಷ್ಠ ವಕೀಲರನ್ನು ಒದಗಿಸಲು ಸಿದ್ಧ: ಠಾಕ್ರೆ
ಗಬ್ಬದ ಹಸು ಕೊಂದವಗೆ 1ವರ್ಷ ಜೈಲು
ಮಹಾರಾಷ್ಟ್ರ ಸರ್ಕಾರಕ್ಕೆ ಸು.ಕೋ. ನೋಟೀಸ್