ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಳ್ವಾ ವಿರುದ್ಧ ಶಿಸ್ತು ಕ್ರಮ: ಮೊಯ್ಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಳ್ವಾ ವಿರುದ್ಧ ಶಿಸ್ತು ಕ್ರಮ: ಮೊಯ್ಲಿ
ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಟಿಕೆಟ್‌ಗಳು 'ಮಾರಾಟ'ವಾಗಿದ್ದವು ಎಂಬ ಮಾರ್ಗರೆಟ್ ಆಳ್ವ ಅವರ ಆರೋಪ ನಿರಾಧಾರ ಹಾಗೂ ಇದು ಶಿಸ್ತು ಉಲ್ಲಂಘನೆಯಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

PTI
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಪಕ್ಷದ ಶಿಸ್ತು ಸಮಿತಿ ಮಾರ್ಗರೆಟ್ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಮಾರ್ಗರೆಟ್ ಆಳ್ವ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿರುವ ಬಳಿಕ ಮೊಯ್ಲಿಯವರ ಈ ಪ್ರತಿಕ್ರಿಯೆ ಹೊರಬಿದ್ದಿದೆ.

"ಹಿರಿಯ ಕಾಂಗ್ರೆಸ್ ನಾಯಕಿ ಆಳ್ವಾರಿಂದ ಶಿಸ್ತು ಉಲ್ಲಂಘನೆಯಾಗಿದೆ. ಇದರಲ್ಲಿ ಸಂಶಯವೇ ಇಲ್ಲ. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಮತ್ತು ಇದು ಸತ್ಯವಲ್ಲ. ಈ ಹೇಳಿಕೆ ಪಕ್ಷದ ಒಗ್ಗಟ್ಟು ಮತ್ತು ಸಮಗ್ರತೆಗೆ ಧಕ್ಕೆಯುಂಟುಮಾಡಿದೆ. ಅವರು ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು. ಇದು ದುರದೃಷ್ಟಕರ" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮೊಯ್ಲಿ ಹೇಳಿದ್ದಾರೆ.

ಎ.ಕೆ.ಆಂಟನಿ ಅವರ ನೇತೃತ್ವದ ಶಿಸ್ತುಸಮಿತಿ ಎದುರು ಹಾಜರಾದ ಬಳಿಕ ಮಾರ್ಗರೆಟ್ ಆಳ್ವ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಬ್ಬಬ್ಬಾ ಇಂವ ಭಾರೀ ಹುಡುಗ!
ಸದ್ಯಕ್ಕೆ ಪೆಟ್ರೋಲಿಯಂ ಬೆಲೆ ಕಡಿತವಿಲ್ಲ- ಪ್ರಧಾನಿ
ಉ.ಪ್ರ ವಿವಿಐಪಿಯನ್ನು ಪ್ರಶ್ನಿಸಲಿರುವ ಎಟಿಎಸ್
ರಾಹುಲ್ ರಾಜ್ ಪ್ರಕರಣ ನ್ಯಾಯಾಂಗ ತನಿಖೆ ಇಲ್ಲ
ರಾಜೀನಾಮೆ ನೀಡಿದ ಮಾರ್ಗರೆಟ್ ಆಳ್ವ
ಪ್ರಯಾಣದಲ್ಲಿದ್ದುದರಿಂದ ಒಬಾಮ ಕರೆ ಸ್ವೀಕರಿಸಿಲ್ಲ: ಪ್ರಧಾನಿ