ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸ್ಫೋಟ: ಸರ್ಕಾರ ಉಲ್ಫಾ ಅಂದರೆ, ಉಲ್ಫಾ ಆರೆಸ್ಸೆಸ್ ಅನ್ನುತ್ತಿದೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಫೋಟ: ಸರ್ಕಾರ ಉಲ್ಫಾ ಅಂದರೆ, ಉಲ್ಫಾ ಆರೆಸ್ಸೆಸ್ ಅನ್ನುತ್ತಿದೆ
ಅಕ್ಟೋಬರ್ 30 ರಂದು ನಡೆಸಿರುವ, 84 ಮಂದಿಯನ್ನು ಆಹುತಿ ತೆಗೆದುಕೊಂಡಿರುವ ಸರಣಿ ಸ್ಫೋಟಗಳು ಉಲ್ಫಾ ಮತ್ತು ಎನ್‌ಡಿಎಫ್‌ಬಿ ನಡೆಸಿರುವ ಕೃತ್ಯ ಎಂದು ಸರ್ಕಾರ ಹೇಳುತ್ತಿದ್ದರೆ, ಉಲ್ಫಾ ಸಂಘಟನೆಯು ಇದು ಆರೆಸ್ಸೆಸ್ ಕೃತ್ಯ ಎಂದು ದೂರಿದೆ.

ಬೋಡೋಲ್ಯಾಂಡಿನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ(ಎನ್‌ಡಿಎಫ್‌ಬಿ)ದ ಕೆಲವು ಸಕ್ರಿಯ ಕಾರ್ಯಕರ್ತರ ಕೈವಾಡವು ವಿಶೇಷ ತನಿಖಾ ತಂಡ(ಎಸ್ಐಟಿ)ದ ತನಿಖೆಯ ವೇಳೆ ಕಂಡು ಬಂದಿದೆ ಎಂದು ಗುವಾಹತಿಯಲ್ಲಿ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಅಲ್ಲದೆ ಸರಣಿ ಬಾಂಬ್ ಸ್ಫೋಟಿಸುವ ಫಿತೂರಿಯಲ್ಲಿ ಉಲ್ಫಾ ಉಗ್ರರ ಕೈವಾಡವೂ ತನಿಖೆಯ ವೇಳೆಗೆ ಗೊತ್ತಾಗಿದೆ ಎಂದು ಹೇಳಿಕೆ ತಿಳಿಸಿದೆ.

ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿರುವ ಅಸ್ಸಾಂ ಸರ್ಕಾರ, ಕುಕೃತ್ಯ ನಡೆಸಿರುವ ಪ್ರಮುಖ ದುಷ್ಕರ್ಮಿಗಳನ್ನು ಗುರುತಿಸಲಾಗಿದ್ದು, ಅವರ ಬಂಧನಕ್ಕೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಇತರ ಸಂಘಸಂಸ್ಥೆಗಳ ಸಂಭಾವ್ಯ ಕೈವಾಡದ ಕುರಿತೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿರುವ ಅಧಿಕೃತ ಹೇಳಿಕೆ, ಈ ಸಂಬಂಧ ಇದುವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದೂ ತಿಳಿಸಿದೆ.

ಸ್ಥಳೀಯ ಉಲ್ಫಾ ಮತ್ತು ಎನ್‌ಡಿಎಫ್‌ಬಿಗಳ ಸಹಾಯದೊಂದಿಗೆ ಬಾಂಗ್ಲಾದೇಶದ ಹುಜಿ ಸಂಘಟನೆ ಈ ಕೃತ್ಯ ನಡೆಸಿರಬಹುದು ಎಂಬ ಸರ್ಕಾರದ ಈ ಹಿಂದಿನ ಹೇಳಿಕೆಯ ಕುರಿತು ಪ್ರಸ್ತುತ ಹೇಳಿಕೆಯಲ್ಲಿ ಯಾವುದೇ ಪ್ರಸ್ತಾಪವಿಲ್ಲ.

ಪ್ರಭಾವಿ ಉಗ್ರಗಾಮಿ ಸಂಘಟನೆ ಎನ್‌ಡಿಎಫ್‌ಬಿ ಪ್ರಸಕ್ತ ಸರ್ಕಾರದೊಂದಿಗೆ ಏಕಪಕ್ಷೀಯ ಕದನವಿರಾಮ ಘೋಷಿಸಿದೆ.

ಅಸ್ಸಾಂ ಸ್ಫೋಟಕ್ಕೆ ಆರೆಸ್ಸೆಸ್ ಕಾರಣ: ಉಲ್ಫಾ
ಸರ್ಕಾರದ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವ ಉಲ್ಫಾ, ಅಕ್ಟೋಬರ್ 30ರ ಸ್ಫೋಟ ಹಾಗೂ ಬೋಡೋ ಪ್ರಾದೇಶಿಕ ಆಡಳಿತ ಜಿಲ್ಲೆ(ಬಿಟಿಎಡಿ)ಳಲ್ಲಿನ ಜನಾಂಗೀಯ ಹಿಂಸಾಚಾರಕ್ಕೆ ಆರೆಸ್ಸೆಸ್ ಕಾರಣ ಎಂದು ಹೇಳಿದೆ.

ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು ಆರೆಸ್ಸೆಸ್ ಏಜೆಂಟ್ ಆಗಿದ್ದು, ಸ್ಫೋಟದಲ್ಲಿ ತನ್ನ ಕೈವಾಡವನ್ನು ಮರೆಮಾಚಲು ಉಲ್ಫಾ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಉಲ್ಫಾ ಅಧ್ಯಕ್ಷ ಅರವಿಂದ ರಾಜ್‌ಕೋವ ತನ್ನ ಇಮೇಲ್ ಹೇಳಿಕೆಯಲ್ಲಿ ಆಪಾದಿಸಿದ್ದಾರೆ.

ಶರ್ಮಾ ಕಾಂಗ್ರೆಸ್‌ನಲ್ಲಿರಲಿ ಅಥವಾ ಎಜಿಪಿಯಲ್ಲಿರಲಿ, ವಾಸ್ತವವಾಗಿ ಅವರೊಬ್ಬ ಆರ್ಎಸ್ಸೆಸ್ ಏಜೆಂಟ್ ಆಗಿದ್ದು, ತನ್ನ ಕೃತ್ಯವನ್ನು ಮುಚ್ಚಿಹಾಕಲು ಉಲ್ಫಾ ಮತ್ತು ಜಿಹಾದಿಗಳು ಒಂದೇ ಎಂಬಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅರವಿಂದ್ ಆರೋಪಿಸಿದ್ದಾರೆ.

ಸರಣಿ ಸ್ಫೋಟದಲ್ಲಿ ಆರೆಸ್ಸೆಸ್ ಕೈವಾಡವನ್ನು ನಿರೂಪಿಸಲು ಉಲ್ಫಾದ ಬಳಿ ಸಾಕಷ್ಟು ಪುರಾವೆಗಳಿವೆ ಎಂದೂ ಉಲ್ಫಾ ಮುಖ್ಯಸ್ಥ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಉಲ್ಫಾ ತನ್ನ ಮುಖವಾಣಿ ಫ್ರೀಡಂ ಪತ್ರಿಕೆಯಲ್ಲಿ, ರಾಷ್ಟ್ರದ ವಿವಿಧ ಭಾಗಗಳಲ್ಲಿ ಸ್ಫೋಟಗಳನ್ನು ನಡೆಸಲು ಅರೆಸ್ಸೆಸ್ ಗುಪ್ತ ನಿರ್ದೇಶನ ನೀಡಿದೆ ಎಂದು ಹೇಳಿತ್ತಾದರೂ ರಾಜ್ಯ ಸರ್ಕಾರ ಈ ದಿಸೆಯಲ್ಲಿ ಯಾವುದೇ ಕ್ರಮಕೊಂಡಿಲ್ಲ ಎಂದು ಅವರು ದೂರಿದ್ದಾರೆ.

ಬಿಜೆಪಿಯೇತರ ರಾಜ್ಯಗಳಲ್ಲಿ ನಡೆಸಲಾಗಿರುವ ಇತ್ತೀಚಿನ ಸ್ಫೋಟಗಳು ಮತ್ತು, ಇವುಗಳಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿಯ ಕೈವಾಡವು ಇದನ್ನು ಪುಷ್ಠೀಕರಿಸಿದೆ ಎಂದೂ ಆವರು ಆಪಾದಿಸಿದ್ದಾರೆ.

ಅಲ್ಲದೆ, ಉಲ್ಫಾವು ಎಂದಿಗೂ ಸ್ಥಳೀಯ ಅಸ್ಸಾಮೀ ಜನತೆಯನ್ನು ಗುರಿಯಾಸಿಕೊಂಡಿಲ್ಲ ಮತ್ತು ಯಾವುದೆ ಜಿಹಾದಿ ಇಲ್ಲವೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿಲ್ಲ ಎಂದೂ ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ಕಟ್ಟಡ ಕುಸಿತ: 6 ಮಂದಿ ಸಾವಿನ ಶಂಕೆ
ಮಾರ್ಗರೆಟ್ ಆಕ್ರೋಶ: ಕಾಂಗ್ರೆಸ್ ಇಬ್ಭಾಗ
ಚಂದ್ರನ ಮತ್ತಷ್ಟು ಸಮೀಪಕ್ಕೆ ಚಂದ್ರಯಾನ-1
ನಿತೀಶ್ ರಾಜೀನಾಮೆ ನೀಡಲಿ: ಲಾಲೂ ಸವಾಲು
ಆಳ್ವಾ ವಿರುದ್ಧ ಶಿಸ್ತು ಕ್ರಮ: ಮೊಯ್ಲಿ
ಅಬ್ಬಬ್ಬಾ ಇಂವ ಭಾರೀ ಹುಡುಗ!