ಸಂಘಟಿತ ಅಪರಾಧಗಳ ಗುಜರಾತ್ ನಿಯಂತ್ರಣ ಮಸೂದೆಗೆ ಸಹಿ ಹಾಕದಿರುವಂತೆ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಶಿಫಾರಸ್ಸು ಮಾಡಿರುವುದಾಗಿ ಪತ್ರಿಕಾ ವರದಿಯೊಂದು ತಿಳಿಸಿದೆ.
ಈ ಕಾಯ್ದೆಯ ದುರ್ಬಳಕೆಯನ್ನು ತಪ್ಪಿಸಲು ಮಸೂದೆಯಲ್ಲಿ ತಿದ್ದುಪಡಿ ಮಾಡುವಂತೆ ಗುಜರಾತ್‌ಗೆ ಸೂಚಿಸಲು ಗೃಹಸಚಿವಾಲಯವು ರಾಷ್ಟ್ರಪತಿಗಳಿಗೆ ಸಲಹೆ ಮಾಡಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ಕಾಯ್ದೆ ಮೋಕಾದ ಆಧಾರದಲ್ಲಿ ಮಸೂದೆಯನ್ನು ರೂಪಿಸಲಾಗಿದೆ ಎನ್ನುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಇದೇ ಆಧಾರದಲ್ಲಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದಿನ ಎನ್‌ಡಿಎ ಸರಕಾರ ಮೋಕಾಗೆ ಅನುಮತಿ ನೀಡಿರುವ ಕಾರಣ ಅದನ್ನು ಯುಪಿಎ ಹಿಂತೆಗೆಯಲು ಸಾಧ್ಯವಿಲ್ಲ ಎಂದು ಗೃಹಸಚಿವ ಶಿವರಾಜ್ ಪಾಟೀಲ್ ಹೇಳುತ್ತಿದ್ದಾರೆ. |