ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮೋದಿ ರಾಜ್ಯದಲ್ಲಿ 80 ದೇವಸ್ಥಾನಗಳು ನೆಲಸಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ ರಾಜ್ಯದಲ್ಲಿ 80 ದೇವಸ್ಥಾನಗಳು ನೆಲಸಮ
PTI
ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿ ಆಧಿಕಾರಿಗಳು ಕಾನೂನು ಬಾಹಿರ ಭೂಮಿಯ ಅತಿಕ್ರಮಣದ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಒಂದು ತಿಂಗಳಲ್ಲಿ ಇಲ್ಲಿನ 80 ದೇವಾಲಯಗಳು ನೆಲಸಮಗೊಂಡಿವೆ ಎಂದು ವರದಿ ತಿಳಿಸಿದೆ.

ಈ ಕಾರ್ಯಾಚರಣೆಯು ಅಕ್ಟೋಬರ್ 13ರಂದು ಆರಂಭಗೊಂಡಿದ್ದು, ಬುಧವಾರದಂದು ರಸ್ತೆಯ ಇಕ್ಕೆಲಗಳಲ್ಲಿದ್ದ 15 ಸಣ್ಣ ಮತ್ತು ಮಧ್ಯಮ ದೇವಾಲಯಗಳು ಕೆಡವಲ್ಪಟ್ಟವು.

ಗಾಂಧಿನಗರದ ಕಲೆಕ್ಟರೋಟ್ ಆಧಿಕಾರಿಗಳ, ಪೋಲಿಸ್ ಸಿಬ್ಬಂದಿ ಮತ್ತು ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಕಟ್ಟಡಗಳನ್ನು ಕೆಡವಲಾಯಿತು. ಗಾಂಧಿನಗರದ ಕಲೆಕ್ಟೊರೇಟಿವ್ ಅಧಿಕಾರಿಗಳು ನಡೆಸಿದ ಸಮೀಕ್ಷೆಯ ಪ್ರಕಾರ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ 107 ಮತ್ತು ಒಳಾಂತರ ಪ್ರದೇಳಗಳಲ್ಲಿ ಸುಮಾರು 307 ಕಾನೂನು ಬಾಹಿರ ದೇವಾಲಯಗಳು ತಲೆಯೆತ್ತಿವೆ. ಈ ಎಲ್ಲಾ ದೇವಾಲಯಗಳನ್ನು ನಿರ್ನಾಮ ಮಾಡಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ದೀಪಾವಳಿಯ ಸಂದರ್ಭ ಮೊದಲನೇ ದೇವಾಲಯವನ್ನು ಕೆಡವಲಾಯಿತು ಆದರೆ ರಾತ್ರಿಯಾಗಿದ್ದುದರಿಂದ ಅಲ್ಲಿ ಯಾವುದೇ ರೀತಿಯ ಪ್ರತಿಭಟನೆಯೂ ಕಂಡುಬರಲಿಲ್ಲ, ಜಿಎಚ್-5 ವೃತ್ತದ ಸುತ್ತಮುತ್ತಲಿನ ಆರು ದೇವಸ್ಥಾನಗಳು ಕೇಲವೇ ಗಂಟೆಗಳಲ್ಲಿ ನೆಲಸಮಗೊಂಡವು.

ಎರಡು ದಿನಗಳ ನಂತರ ವಿಶ್ವ ಹಿಂದೂ ಪರಿಷತ್, ಕೆಲವು ಬಿಜಿಪಿ ಬಂಡುಕೋರರ ಬೆಂಬಲದೊಂದಿಗೆ ಪ್ರತಿಭಟನೆಯನ್ನು ಅಯೋಜಿಸಿತ್ತು.

ಗಾಂಧಿನಗರದ ಜಿಲ್ಲಾಧಿಕಾರಿ ಸಂಜೀವ್ ಕುಮಾರ್ "ಈ ಕಾರ್ಯಾಚರಣೆಯಡಿಯಲ್ಲಿ ಎಲ್ಲಾ ಕಾನೂನು ಬಾಹಿರ ಕಟ್ಟಡಗಳನ್ನು ಕೆಡವಲಾಗುತ್ತದೆ. ಸರಕಾರಿ ಭೂಮಿಯಲ್ಲಿನ ಯಾವುದೇ ಕಾನೂನು ಬಾಹಿರ ಕಟ್ಟಡಗಳನ್ನು ಉಳಿಸುವುದಿಲ್ಲ" ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪರಸ್ಪರರ ಸಾವಿಗೆ ಕಾದಿದ್ದ ಮೊರಾರ್ಜಿ, ಚರಣ್ ಸಿಂಗ್!
ಕಾನ್ಪುರದ ಮಠಾಧೀಶ ದಯಾನಂದ ಪಾಂಡೆ ಬಂಧನ
ಗುಜರಾತ್ ಮಸೂದೆಗೆ ಸಹಿ ಹಾಕದಿರಲು ರಾಷ್ಟ್ರಪತಿಗೆ ಸಲಹೆ?
ಸಿಂಗೂರು ಕೊಲೆ: ಸಿಪಿಎಂ ಕಾರ್ಯಕರ್ತರಿಗೆ ಜೀವಾವಧಿ
ಚಂಡೀಪುರದಲ್ಲಿ ಯಶಸ್ವೀ ಕ್ಷಿಪಣಿ ಪರೀಕ್ಷೆ
ರಾವ್ ರಾಜ್ಯತ್ಯಾಗ, ಆಳ್ವಾ ಔಟ್: ದೇಶ್‌ಮುಖ್ ನಿರಾಳ